Advertisement

ಒಡೆದ 1,200 ಜಾತಿಗಳ ಒಗ್ಗಟ್ಟಿಗೆ ಯತ್ನ

03:56 PM Jul 14, 2019 | Team Udayavani |

ಅಥಣಿ: ದೇಶದಲ್ಲಿ ಚರ್ಮೊದ್ಯೋಗ ಮಾಡುತ್ತಿರುವ ಮತ್ತು ಒಡೆದು ಹೋದ 1,200 ಜಾತಿಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಒಂದು ಬೃಹತ್‌ ಶಕ್ತಿಯಾಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡುಲಾಗುತ್ತಿದೆ ಎಂದು ರಾಷ್ಟ್ರೀಯ ಚರ್ಮಕಾರರ ಸಂಘದ ಅಧ್ಯಕ್ಷ ಬಬನರಾವ್‌ ಗೋಲಪ ಹೇಳಿದರು.

Advertisement

ಇಲ್ಲಿನ ಹರಳಯ್ಯ ಸಮಾಜದ ಲೀಡ್ಕರ್‌ ಕಾಲೋನಿಗೆ ಭೇಟಿ ನೀಡಿ ಚರ್ಮಕುಶಲ ಕರ್ಮಿಗಳ ಕುಶಲೋಪರಿ ವಿಚಾರಿಸಿದ ಅವರು, ಅಥಣಿಯಲ್ಲಿ ಅತಿ ಹೆಚ್ಚಿನ ರೀತಿ ಕೊಲ್ಲಾಪುರಿ ಚಪ್ಪಲಿಗಳನ್ನು ಚರ್ಮಕಾರರು ಕೈಯಿಂದ ನಿರ್ಮಿಸುತ್ತಿರುವುದು ನಮಗೆ ಈಚೆಗೆ ಗಮನಕ್ಕೆ ಬಂದಿದೆ. ಇಂತಹ ಕುಶಲ ಕರ್ಮಿಗಳಿಗೆ ಇನ್ನಷ್ಟು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಸೌಕರ್ಯಗಳನ್ನು ನೀಡಬೇಕು. ಅದೇ ರೀತಿ ಇಲ್ಲಿಯ ಚರ್ಮ ಕುಶಲ ಕರ್ಮಿಗಳು ತಯಾರಿಸುವ ಚಪ್ಪಲಿಗಳ ಮೇಲಿನ ಪ್ರತಿಶತ 5 ರಿಂದ 12ರಷ್ಟು ಜಿಎಸ್‌ಟಿಯನ್ನು ಸಂಪೂರ್ಣ ತೆಗೆದು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯ ಶರಣ ಹರಳಯ್ಯ ದಲಿತ ವೇದಿಕೆ ಅಧ್ಯಕ್ಷ ಅನಿಲ ಸೌಧಾಗರ ಮಾತನಾಡಿ, ಚರ್ಮದ ಕಚ್ಚಾ ವಸ್ತುವಿನ ಬೆಲೆ ದಿನದಿಂದ-ದಿನಕ್ಕೆ ಹೆಚ್ಚುತ್ತಿರುವುದರಿಂದ ಇಲ್ಲಿಯ ಚರ್ಮ ಕಶಲ ಕರ್ಮಿಗಳ ಸ್ಥಿತಿ ಚಿಂತಾ ಜನಕವಾಗಿದೆ. ಇವರು ಕೈಯಿಂದ ಮಾಡಲಾದ ಚಪ್ಪಲಿಗಳ ಮೇಲೆ ಜಿಎಸ್‌ಟಿ ಹಾಕಿರುವುದರಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ದಲೀಪ ಕಾಂಬಳೆ, ನಾರಾಯಣ ಹೋನಕಾಂಡೆ, ಬಿ.ಎಸ್‌. ಸಿಂಧೆ, ಶಿವಾನಂದ ಸೌದಾಗರ, ಶಂಕರ ಸಿಂಧೆ, ಅಮರ ಸಾಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next