Advertisement

`ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪ್ರಯತ್ನಿಸಿ’

12:50 PM Sep 15, 2018 | Team Udayavani |

ಉಪ್ಪಿನಂಗಡಿ: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಪ್ರಯತ್ನಿಸುವಂತೆ ಕ್ಷೇತ್ರ ಶಾಸಕ ಸಂಜೀವ ಮಠಂದೂರು ಹೇಳಿದರು. ಗಾಂಧಿ ಪಾರ್ಕ್‌ ಬಳಿಯ ಸರಕಾರಿ ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್‌ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಶಾಸಕರು ನೇರ ಮುಕ್ತ ಸಂವಾದ ನಡೆಸಿದರು. ಶಾಸಕರಾದ ಬಳಿಕ ಇದು ಪ್ರಥಮ ಭೇಟಿಯಾಗಿದ್ದು, ವಿದ್ಯಾರ್ಥಿ ನಿಲಯದ್ಲಲಿರುವ  ವಿದ್ಯಾರ್ಥಿನಿಯರ ಅಂಕಿ-ಅಂಶ ಪಡೆದರು.

Advertisement

ಬಳಿಕ ಎಲ್ಲ ವಿದ್ಯಾರ್ಥಿಗಳನ್ನು ದಿನಚರಿಯ ಬಗ್ಗೆ ವಿಚಾರಿಸಿದರು. ಕೊಠಡಿಗಳ ಕೊರತೆ ಹಾಗೂ ಮಳೆಗಾಲದಲ್ಲಿ ಛಾವಣಿಯಿಂದ ಮಳೆ ನೀರು ಸೋರಿಕೆಯಾಗುತ್ತಿರುವ ಕುರಿತು ಶಾಸಕರ ಗಮನ ಸೆಳೆಯಲಾಯಿತು. ಇದಕ್ಕೆ ಉತ್ತರಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಸುಮಾರು 30 ನಿಮಿಷಗಳ ಕಾಲ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ನಿಲಯದ ಪಕ್ಕದಲ್ಲೇ ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜುಗಳ ಸಹಿತ ಎಲ್ಲ ವ್ಯವಸ್ಥೆಗಳು ಅನುಕೂಲಕರವಾಗಿವೆ. ಹೆತ್ತವರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಿದ್ದು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳುವ ಶಿಕ್ಷಣ ಪಡೆಯಿರಿ ಎಂದರು.

ನಿಲಯದ ಅಡುಗೆ ಸಿಬ್ಬಂದಿ, ಮಕ್ಕಳ ಊಟದ ಪ್ರಭಾರಿ ಹಾಗೂ ಪಾಲಕರ ಜತೆಗೆ ಪ್ರತ್ಯೇಕ ಸಭೆ ನಡೆಸಿ, ಆಹಾರ ಸಾಮಗ್ರಿಗಳ ಗುಣಮಟ್ಟದ ವಿವರ ಪಡೆದರು. ವೇತನದ ಸಮಸ್ಯೆ ಇದ್ದರೂ ತನ್ನ ಗಮನಕ್ಕೆ ತನ್ನಿ. ವಿದ್ಯಾರ್ಥಿಗಳನ್ನು ತಮ್ಮ ಮನೆ ಮಕ್ಕಳಂತೆ ಕಾಣಿರಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ರಹಿಮಾನ್‌, ಸದಸ್ಯರಾದ ರಮೇಶ ಭಂಡಾರಿ, ಚಂದ್ರಶೇಖರ ಮಡಿವಾಳ, ಸುನೀಲ್‌ ದಡ್ಡು, ಸುರೇಶ ಅತ್ರಮಜಲು, ಪ್ರಮುಖರಾದ ಸದಾನಂದ ಕಾರ್‌ ಕ್ಲಬ್‌, ಜಗದೀಶ ಶೆಟ್ಟಿ ಉಪಸ್ಥಿತರಿದ್ದರು. ನಿಲಯ ಪಾಲಕಿ ಶೋಭಾ ಶಾಸಕರನ್ನು ಬರಮಾಡಿಕೊಂಡರು. ವಿದ್ಯಾರ್ಥಿ ಪ್ರಜ್ಞಾ ಸ್ವಾಗತಿಸಿ, ಚೈತ್ರಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next