Advertisement
ಮನೆ, ಅಂಗಡಿಗಳಿಗೆ ನೀರು ನುಗ್ಗಿರುವ ಕುಂಜಿಬೆಟ್ಟು ಪರಿಸರದಲ್ಲಿ ಚರಂಡಿ ಕಾಮಗಾರಿ ನಡೆಸಲಾಯಿತು. ಇಲ್ಲಿ ಒಳಚರಂಡಿ ನೀರು ಕೂಡ ಮಳೆ ನೀರಿನೊಂದಿಗೆ ಸೇರಿ ಸಮಸ್ಯೆ ಯಾಗಿದೆ.
ಉಡುಪಿ-ಮಣಿಪಾಲ ಹೆದ್ದಾರಿಯ ಕುಂಜಿಬೆಟ್ಟು ಭಾಗದಲ್ಲಿ ಚರಂಡಿ ಅವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಶಾಸಕ ಕೆ.ರಘುಪತಿ ಭಟ್ ಅವರು ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಮಂಜುನಾಥ ನಾಯಕ್, ನಗರಸಭಾ ಸದಸ್ಯ ಗಿರೀಶ್ ಅಂಚನ್ ಮತ್ತಿತರರು ಹಾಜರಿದ್ದರು.