Advertisement

ಒಂದು ತಿಂಗಳು PAk ನಲ್ಲಿ ನೆಲೆಸಿ ಬನ್ನಿ: ಅಖಿಲೇಶ್ ಯಾದವ್ ಗೆ ಬಿಜೆಪಿ ಅಧ್ಯಕ್ಷ ಸಿಂಗ್ ಸವಾಲು

10:11 AM Jan 02, 2020 | Nagendra Trasi |

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯನ್ನು ವಿರೋಧಿಸುತ್ತಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗೆ ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರಾ ದೇವ್ ಸಿಂಗ್ ವಾಗ್ದಾಳಿ ನಡೆಸಿದ್ದು, ಅಖಿಲೇಶ್ ಒಂದು ತಿಂಗಳ ಕಾಲ ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡಿ ಹಿಂದೂಗಳ ಯಾವ ರೀತಿ ಅಮಾನವೀಯ ಸ್ಥಿತಿಯನ್ನು ಎದುರಿಸುತ್ತಾರೆಂಬ ಅನುಭವ ಪಡೆಯಲಿ ಎಂದು ತಿರುಗೇಟು ನೀಡಿದ್ದಾರೆ.

Advertisement

ಅಖಿಲೇಶ್ ಒಂದು ತಿಂಗಳ ಕಾಲ ಪಾಕಿಸ್ತಾನದಲ್ಲಿ ನೆಲೆಸಲಿ ಮತ್ತು ಹಿಂದೂ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲಿ. ಅಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಕಿರುಕುಳದ ಅನುಭವ ಪಡೆಯಲಿ ಎಂದರು.

ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಬಡ ಜನತೆಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಪ್ರಿಯಾಂಕಾ ಗಾಂಧಿ ವಾದ್ರಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ ಪಿಆರ್)ಯ ಅರ್ಜಿಯನ್ನು ತಾನು ಭರ್ತಿ ಮಾಡುವುದಿಲ್ಲ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಸಿಂಗ್ ಈ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next