Advertisement

“ಪೋಕ್ಸೋ’ವಯೋಮಿತಿ 18ರಿಂದ 16ಕ್ಕೆ ಇಳಿಕೆ? ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸ್ಸು

09:42 PM Mar 12, 2021 | Team Udayavani |

ನವದೆಹಲಿ: ಲೈಂಗಿಕ ಅಪರಾಧ ಎಸಗಿ, “ಅಪ್ರಾಪ್ತ’ರೆಂದು ರಕ್ಷಣೆ ಪಡೆಯುತ್ತಿದ್ದ 16-18 ವಯೋಮಾನದ ಅಪರಾಧಿಗಳನ್ನು ವಯಸ್ಕರರೆಂದೇ ಪರಿಗಣಿಸಿ, ಶಿಕ್ಷಿಸುವಂತೆ ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

Advertisement

18 ವರ್ಷಕ್ಕಿಂತ ಕೆಳಗಿನವರು ಲೈಂಗಿಕ ಅಪರಾಧ ಎಸಗುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳ ಸತ್ಯಾಸತ್ಯತೆ ಅಧ್ಯಯನಿಸಲು ಸಮಿತಿ ರಚಿಸಲಾಗಿತ್ತು. ಪೋಕ್ಸೋ ಕಾಯ್ದೆ ಅನ್ವಯ 2017ರಲ್ಲಿ 32,608 ಪ್ರಕರಣ ದಾಖಲಾಗಿದ್ದರೆ, 2019ರಲ್ಲಿ ಈ ಸಂಖ್ಯೆ 47,325ಕ್ಕೆ ಏರಿಕೆಯಾಗಿದೆ. ಕೇವಲ ಎರಡೇ ವರ್ಷಗಳಲ್ಲಿ ಆಗಿರುವ ಶೇ.45 ಪ್ರಕರಣಗಳ ಹೆಚ್ಚಳ ಕುರಿತು ಸಮಿತಿ ಆತಂಕ ವ್ಯಕ್ತಪಡಿಸಿದೆ.

16-18 ವರ್ಷದೊಳಗಿನ ಅಪರಾಧಿಗಳು ಬಹುತೇಕರು ತಾವು ಇನ್ನೂ ಅಪ್ರಾಪ್ತರು, ತಿಳಿಯದೆ ತಪ್ಪಾಗಿದೆ ಎನ್ನುವ ವಾದ ಮುಂದಿಟ್ಟು, ಪೋಕ್ಸೋ ಕಾಯ್ದೆಯಡಿ ರಕ್ಷಣೆ ಪಡೆಯುತ್ತಿದ್ದಾರೆ. ಹೀಗಾಗಿ ಪೋಕ್ಸೋ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ಇದನ್ನೂ ಓದಿ :ಹೋಟೆಲ್ ಸಿಬ್ಬಂದಿಗೆ 15 ದಿನಕ್ಕೊಮ್ಮೆ ಕಡ್ಡಾಯ ಸೋಂಕು ಪರೀಕ್ಷೆ

ಪ್ರಸ್ತುತ, ಪೋಕ್ಸೋ ಕಾಯ್ದೆ 18ಕ್ಕಿಂತ ಕಡಿಮೆ ವಯಸ್ಸಿನ ಅಪರಾಧಿಗಳೆಲ್ಲರನ್ನೂ ಅಪ್ರಾಪ್ತರೆಂದೇ ಪರಿಗಣಿಸುತ್ತಿದೆ. ಸಮಿತಿಯ ಶಿಫಾರಸ್ಸು ಮುಂದಿನವಾರ ಸಂಸತ್‌ನಲ್ಲಿ ಮಂಡನೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next