Advertisement

ಕೊನೆಗೆ ಹಂತದಲ್ಲಿ ಜೆಡಿಎಸ್‌ ಟಿಕೆಟ್‌ ಸಿಗುವ ವಿಶ್ವಾಸ

10:33 AM Feb 21, 2018 | Team Udayavani |

ಕಲಬುರಗಿ: ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿ ಹತ್ತು ಸಾವಿರಕ್ಕೂ ಹೆಚ್ಚು ಮತದಾರರನ್ನು ಸಂಘಟಿಸಲಾಗಿದೆಯಲ್ಲದೇ ಕಳೆದ 9 ತಿಂಗಳಿನಿಂದ ಕುಮಾರಣ್ಣ ಕಾರ್ಯಕ್ರಮ ಮನೆ-ಮನೆ ತಲುಪಿಸಲಾಗಿ ಪ್ರಬಲ ಆಕಾಂಕ್ಷಿಯಾಗಿರುತ್ತೇನೆ.

Advertisement

ಆದರೆ ಈಗ ಪಕ್ಷ ಸೇರಿದ ದಿನವೇ ಬಸವರಾಜ ಡಿಗ್ಗಾವಿ ಪಕ್ಷದ ಟಿಕೆಟ್‌ ಘೋಷಣೆ ಮಾಡಿರುವುದು ತುಂಬಾ ನೋವುಂಟಾಗಿದೆ ಎಂದು ಜೆಡಿಎಸ್‌ ರಾಜ್ಯ ಯುವ ಉಪಾಧ್ಯಕ್ಷ ಕೃಷ್ಣಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ದಕ್ಷಿಣದಲ್ಲಿ ತಾವು ಹಾಗೂ ಸುರೇಶ ಮಹಾಗಾಂವಕರ ಆಕಾಂಕ್ಷಿಗಳಾಗಿದ್ದೇವೆ. 

ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿದ್ದರೆ ಅಸಮಾಧಾನ ಆಗುತ್ತಿರಲಿಲ್ಲ. ಜತೆಗೆ ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತಮ್ಮನ್ನು ವಿಶ್ವಾಸ ತೆಗೆದುಕೊಂಡು ಟಿಕೆಟ್‌ ಘೋಷಣೆ ಮಾಡಿದ್ದರೆ ತಮ್ಮ ಮನಸ್ಸಿಗೆ ಘಾಸಿ ಉಂಟಾಗುತ್ತಿರಲಿಲ್ಲ. ಈಗ ಮುಂದೇನು ಮಾಡಬೇಕೆಂಬುದನ್ನು ಬೆಂಬಲಿಗರ ಸಭೆ ಕರೆದು ನಿರ್ಧರಿಸುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಜರುಗಿದ ಬಹಜನ ಸಮಾಜ ಪಕ್ಷ ಹಾಗೂ ಜಾತ್ಯಾತೀತ ಜನತಾದಳದ ಸಮಾವೇಶದಲ್ಲಿ ಹಠಾತ್ತನೇ
ಕಾಣಿಸಿಕೊಂಡ ಶ್ರೀಗುರು ವಿದ್ಯಾಪೀಠದ ಬಸವರಾಜ್‌ ಡಿಗ್ಗಾವಿ ಅವರಿಗೆ ಜೆಡಿ(ಎಸ್‌) ಪಕ್ಷದಿಂದ ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು ಸರಿಯಲ್ಲ. ಡಿಗ್ಗಾವಿ ಅವರು ಪಕ್ಷದ ಸದಸ್ಯರೂ ಅಲ್ಲ. ಅವರ ಹೆಸರನ್ನು ಈಗಲೇ ನಾನು ಕೇಳುತ್ತಿದ್ದೇನೆ. ಇನ್ನೂವರೆಗೂ ಅವರ ಮುಖ ಸಹ ನೋಡಿಲ್ಲ. ಅಂತಹ ವ್ಯಕ್ತಿಗೆ ವರಿಷ್ಠರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಟಿಕೆಟ್‌ ಕೊಟ್ಟಿದ್ದಾರೆ. 

ಡಿಗ್ಗಾವಿ ಅವರಿಗೆ ಟಿಕೆಟ್‌ ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆಯೇ ನನಗೆ ಹಲವಾರು ಬೆಂಬಲಿಗರು ಮೊಬೈಲ್‌ ಮೂಲಕ ಕರೆ
ಮಾಡಿ ಎಷ್ಟು ಹಣ ತೆಗೆದುಕೊಂಡು ಸುಮ್ಮನಿದ್ದೀರಿ ಎಂದು ಕೇಳುತ್ತಿದ್ದಾರೆ. ಆದ್ದರಿಂದ ಬೆಂಬಲಿಗರಿಗೆ ನಿಜವಾದ ಸಂಗತಿ ತಿಳಿಸಲು ಸಭೆ ಕರೆಯಲಾಗಿದೆಯಲ್ಲದೇ ವರಿಷ್ಠರ ಬಳಿ ತೆರಳಲು ನಿರ್ಧರಿಸಲಾಗಿದೆ ಎಂದು ವಿವರಣೆ ನೀಡಿದರು. ಶಿವಲಿಂಗಯ್ಯಸ್ವಾಮಿ ಸಾವಳಗಿ, ಸೋಮನಾಥ್‌ ರೆಡ್ಡಿ, ಲಾಲ್‌ ಮೊಹ್ಮದ್‌, ನಬಿ ಪಟೇಲ್‌, ಶಿವಲಿಂಗಪ್ಪ ಪಾಟೀಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next