Advertisement

ಸರಸ್ವತಿ ದೇಗುಲ-ಕಲ್ಯಾಣಿ ಜೀರ್ಣೋದ್ಧಾರಕ್ಕೆ ಭರವಸೆ

10:56 AM Jun 01, 2018 | Team Udayavani |

ಕಾಳಗಿ: ಪಟ್ಟಣದ ಸರಸ್ವತಿ ಕಲ್ಯಾಣಿ ಮರುಜೀವ ಪಡೆದುಕೊಂಡಿದ್ದು, ಗುರುವಾರ ತಾಪಂ ಕಾರ್ಯನಿರ್ವಾಹಕ
ಅಧಿಕಾರಿ ಅಬ್ದುಲ್‌ ನಬಿ ಯಲಗಾರ ಭೇಟಿ ನೀಡಿ ಕಲ್ಯಾಣಿ ಮೆಟ್ಟಿಲು, ಗೋಡೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

Advertisement

ಮಂಗಳವಾರ “ಉದಯವಾಣಿ’ಯಲ್ಲಿ “ರಾಷ್ಟ್ರಕೂಟರ ಕಾಲದ ಸರಸ್ವತಿ ಕಲ್ಯಾಣಿಗೆ ಮರುಜೀವ’ ಎನ್ನುವ ತಲೆ ಬರಹದಡಿ ಪ್ರಕಟವಾದ ವರದಿಗೆ ಸ್ಪಂದಿಸಿ ಗುರುವಾರ ಕಲ್ಯಾಣಿಗೆ ಭೇಟಿ ನೀಡಿ, ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಹಾಗೂ ಬಾವಿಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಾಕಾರ ಅವಶ್ಯವಾಗಿದೆ ಎಂದರು.

 ಸರಸ್ವತಿ ಕಲ್ಯಾಣಿ ಸ್ವಚ್ಚತೆ ಕಾರ್ಯ ಪ್ರಾರಂಭಿಸಿದ ಯುವಕರ ಕಾರ್ಯಕ್ಕೆ ಶ್ಲಾಘಿಸಿದ ಅವರು ಕಲ್ಯಾಣಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದು ಸಂತಸದಾಯಕ ಆಗಿದೆ ಎಂದರು.

ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಲ್ಯಾಣಿಯಲ್ಲಿನ ಸಂಪೂರ್ಣ ಹೂಳು ತೆಗೆಸಲಾಗುವುದು. ಗೋಡೆ ಹಾಗೂ ಮೆಟ್ಟಿಲುಗಳನ್ನು ಸರಿಪಡಿಸಿ ನಿರ್ಮಿಸಲಾಗುವುದು. ಸರಸ್ವತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪುರಾತತ್ವ ಇಲಾಖೆಯಡಿ ಅಭಿವೃದ್ಧಿ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಪಂಚಾಯತ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ ಬರಗಾಲಿ, ಲೆಕ್ಕಾಧಿಕಾರಿ ಶಾಂತಗೌಡ ಪಾಟೀಲ, ಬಿಲ್‌ ಕಲೆಕ್ಟರ್‌ ದತ್ತು
ಕಲಾಲ್‌, ಪಿಇಎ ಹಣಮಂತರೆಡ್ಡಿ, ಬಿಎಸ್‌ಸಿ ಕಾಳಪ್ಪ ಕಡಬೂರ, ಗ್ರಾಪಂ ಸದಸ್ಯ ಜಗನ್ನಾಥ ಚಂದಕೇರಿ, ಸರಸ್ವತಿ ದೇವಸ್ಥಾನ ಸಮಿತಿ ಅಧ್ಯಕ್ಷ ರವಿದಾಸ ಪತಂಗೆ, ಬಸವರಾಜ ಸಿಂಗಶೆಟ್ಟಿ, ಉದಯಕುಮಾರ ಸಿಂಗಶೆಟ್ಟಿ, ಮುನೀರ ಬಿಜಾಪುರ, ಕೂಲಿ ಕಾರ್ಮಿಕರಾದ ರಂಗಾ ಒಡೆಯರಾಜ, ಸಂತೋಷ ಒಡೆಯರಾಜ, ಅನಿಲ ಒಡೆಯರಾಜ, ತಿಪ್ಪ ಒಡೆಯರಾಜ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next