Advertisement

ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್‌

01:16 AM Jul 09, 2019 | Sriram |

ವಾಷಿಂಗ್ಟನ್‌: ಯುರೇನಿಯಂ ಸಂಗ್ರಹ ಮಿತಿಯನ್ನು ಮೀರಿದ್ದಾಗಿ ಹೇಳಿಕೊಂಡಿರುವ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಇರಾನ್‌ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ನೀವು ಯುರೇನಿಯಂ ಸಂಗ್ರಹ ಹೆಚ್ಚಳ ಮಾಡುವುದು ಯಾವ ಕಾರಣಕ್ಕೆ ಎಂಬುದು ನನಗೆ ಗೊತ್ತಿದೆ. ಇದು ಒಳ್ಳೆಯ ಸಂಗತಿಯಲ್ಲ. ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಟ್ರಂಪ್‌ ಹೇಳಿದ್ದಾರೆ.

Advertisement

ಅಲ್ಲದೆ, ರವಿವಾರ ಇದೇ ವಿಚಾರ ಕುರಿತಂತೆ ಮಾತನಾಡಿದ್ದ ವಿದೇಶಾಂಗ ಸಚಿವ ಮೈಕ್‌ ಪೋಂಪೊÂà ಯುರೇನಿಯಂ ಸಂಗ್ರಹ ಮಿತಿಯನ್ನು ಮೀರಿದ್ದಕ್ಕೆ ಇರಾನ್‌ ವಿರುದ್ಧ ಹೆಚ್ಚುವರಿ ನಿಷೇಧ ಹೇರಲಾಗುತ್ತದೆ ಎಂದಿದ್ದರು. ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕೆ ಮಾತ್ರವೇ ಬಳಸುವಂತೆ ಯುರೇನಿಯಂ ಸಂಗ್ರಹ ಮಿತಿಯನ್ನು ಶೇ. 3.67ಕ್ಕೆ ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next