Advertisement
ಭಾರತದಿಂದ ಅಮೆರಿಕಕ್ಕೆ ಭಾರೀ ಪ್ರಮಾಣದಲ್ಲಿ ಮಲೇರಿಯಾ ನಿಯಂತ್ರಣ ಮಾತ್ರೆಗಳನ್ನು ರಫ್ತು ಮಾಡಲಾಗಿತ್ತು. ಜತೆಗೆ ಅವುಗಳನ್ನು ಅಮೆರಿಕದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತಿದೆ. ಶ್ವೇತಭವನದ ವೈದ್ಯರ ಜತೆಗೆ ವಿಶೇಷವಾಗಿ ಚರ್ಚೆ ನಡೆಸಿಲ್ಲ ಎಂದು ಹೇಳಿರುವ ಅವರು, ಇತರ ವೈದ್ಯರ ಸಲಹೆ ಮೇರೆಗೆ ಅದನ್ನು ತೆಗೆದುಕೊಳ್ಳುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳ ಆರೋಗ್ಯ ಕ್ಷೇತ್ರದ ಪರಿಣತರು ಈಗಾಗಲೇ ಎಚ್ಚರಿಕೆ ನೀಡಿರುವ ಪ್ರಕಾರ ಹೈಡ್ರೋಕ್ಲೋರೋಕ್ವಿನ್ ಮಾತ್ರೆ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದೆ ಎಂಬುದಕ್ಕೆ ಖಾತರಿ ಇಲ್ಲ. ಅದರಿಂದಾಗಿ ಹೃದಯ ಸಂಬಂಧಿ ಸೇರಿದಂತೆ ಹಲವು ಪ್ರತಿಕೂಲ ಪರಿಣಾಮ ಗಳ ಬಗ್ಗೆ ಕೂಡ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದಾರೆ.
ಈಗಾಗಲೇ ಹಲವಾರು ಬಾರಿ ಇದೇ ಮಾದರಿಯ ಎಚ್ಚರಿಕೆಯನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಡಬ್ಲ್ಯೂಎಚ್‌ಒ ಸದಸ್ಯತ್ವದಿಂದ ಹೊರಬರುವ ಬಗ್ಗೆಯೂ ಮಾತುಗಳನ್ನಾಡಿದ್ದಾರೆ. ತಮ್ಮ ನೇತೃತ್ವದ ಸರಕಾರ ಈಗಾಗಲೇ ಸಂಸ್ಥೆಯನ್ನು ಹೇಗೆ ಪುನರ್‌ರಚಿಸಬೇಕು ಎಂಬ ಬಗ್ಗೆ ಚರ್ಚೆಗಳನ್ನು ಆರಂಭಿಸಿದೆ ಎಂದು ನಾಲ್ಕು ಪುಟಗಳ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ.
Related Articles
Advertisement
ಸ್ವತಂತ್ರ ತನಿಖೆಗೆ ನಿರ್ಣಯ ಅಂಗೀಕಾರಕೋವಿಡ್ ಉಗಮದ ಬಗ್ಗೆ ಸ್ವತಂತ್ರ ತನಿಖೆಯಾಗ ಬೇಕು ಎಂಬ ಅಂಶದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿರುವ ಎರಡು ದಿನಗಳ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ನಿರ್ಣಯವೊಂದಕ್ಕೆ ಸಹಮತ ದಿಂದ ಅಂಗೀಕಾರ ವ್ಯಕ್ತಪಡಿಸಲಾಗಿದೆ. ವೈರಸ್ ವಿರುದ್ಧ ಡಬ್ಲ್ಯೂಎಚ್‌ಒ ಕೈಗೊಂಡ ಕ್ರಮಗಳ ಬಗ್ಗೆಯೂ ತನಿಖೆಯ ವ್ಯಾಪ್ತಿ ಇರಬೇಕು ಎಂಬ ಬಗ್ಗೆಯೂ ಒಪ್ಪಿಕೊಳ್ಳಲಾಗಿದೆ. ಅಮೆರಿಕ ಕೂಡ ಈ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದೆ. ಶೀಘ್ರ 50 ವೆಂಟಿಲೇಟರ್ ಭಾರತಕ್ಕೆ
ಕೋವಿಡ್ ದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರೂ ಅಮೆರಿಕ ತನ್ನ ದೊಡ್ಡತನ ಮೆರೆದಿದೆ. ಅಮೆರಿಕವು ಭಾರತಕ್ಕೆ ಕೊಡುಗೆಯಾಗಿ ಮೊದಲ ಕಂತಿನಲ್ಲಿ 50 ವೆಂಟಿಲೇಟರ್‌ಗಳನ್ನು ರವಾನಿಸುತ್ತಿದೆ. “ಅಮೆರಿಕ ಅಧ್ಯಕ್ಷ ಟ್ರಂಪ್ ಇತ್ತೀಚೆಗಷ್ಟೇ 200 ವೆಂಟಿಲೇಟರ್‌ಗಳನ್ನು ಭಾರತಕ್ಕೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಅಮೆರಿಕ ಸೂಕ್ತ ದರ ನಿಗದಿ ಮಾಡಲಿದೆ ಎಂದೇ ನಂಬಲಾಗಿತ್ತು. ಆದರೆ, ಈ ವೆಂಟಿಲೇಟರ್‌ಗಳು ಸಂಪೂರ್ಣವಾಗಿ ಕೊಡುಗೆ ರೂಪದಲ್ಲಿ ಇರಲಿವೆ ಎಂದು ಅಮೆರಿಕನ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಕಂತಿನಲ್ಲಿ 50 ವೆಂಟಿ ಲೇಟ ರ್‌ಗಳು ಭಾರತವನ್ನು ಶೀಘ್ರವೇ ತಲುಪಲಿವೆ’ ಎಂದು ಯುಎಸ್‌ಎಐಡಿಯ ನಿರ್ದೇಶಕ ರಮೋನಾ ಎಲ್ ಹಮಾಯಿ ಹೇಳಿದ್ದಾರೆ. ಕೋವಿಡ್ ದ ಬಿಕ್ಕಟ್ಟಿನ ನಡುವೆಯೂ ತನ್ನ ಮಿತ್ರ ರಾಷ್ಟ್ರಗಳಿಗೆ ನೆರವಾಗುವುದು ಅಮೆರಿಕಕ್ಕೆ ಅನಿವಾರ್ಯವಾಗಿದೆ. ಕೋವಿಡ್ ಪರಿಸ್ಥಿತಿಯನ್ನು ಅಧ್ಯಕ್ಷ ಟ್ರಂಪ್ ಸರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ಅವರ ತಪ್ಪುಗಳನ್ನು ನಮ್ಮ ಮೇಲೆ ಹಾಕುವ ನಿಟ್ಟಿನಲ್ಲಿ ನಮ್ಮನ್ನು ಆಕ್ಷೇಪಿಸುತ್ತಿದ್ದಾರೆ.
ಝಾಹೋ ಲಿಜಾನ್, ಚೀನಾ ವಿದೇಶಾಂಗ ಇಲಾಖೆ ವಕ್ತಾರ ಅಮೆರಿಕ ಅಧ್ಯಕ್ಷರು ನಮಗೆ ಬರೆದ ಪತ್ರದ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ವಾರ್ಷಿಕ ಸಮ್ಮೇಳನದಲ್ಲಿ ಬ್ಯುಸಿಯಾಗಿದ್ದೇವೆ.
ಫಡೇಲಾ ಚೈಬ್, ಡಬ್ಲ್ಯೂಎಚ್‌ಒ ವಕ್ತಾರ