Advertisement

ಗುರುವಾರ ದೀಪಾವಳಿ ಆಚರಿಸಲಿರುವ ಟ್ರಂಪ್‌

07:32 AM Oct 23, 2019 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಬಾರಿಯೂ ತಮ್ಮ ಆಡಳಿತ ಕಚೇರಿ ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿಕೊಳ್ಳಲಿದ್ದಾರೆ. ಈ ಸಂಬಂಧ ಟ್ರಂಪ್‌ ಕಚೇರಿಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು ಗುರುವಾರ ದೀಪಾವಳಿ ಆಚರಣೆ ಸಿದ್ಧತೆ ನಡೆಯುತ್ತಿದೆ.

Advertisement

ಇದು ಡೊನಾಲ್ಡ್‌ ಟ್ರಂಪ್‌ ಅವರ 3ನೇ ದೀಪಾವಳಿಯಾಗಿದೆ. 2009ರಲ್ಲಿ ಬರಾಕ್‌ ಒಬಾಮ ಅವರು ಈ ಹೊಸ ಪದ್ದತಿಯನ್ನು ಶ್ವೇತ ಭವನದಲ್ಲಿ ಜಾರಿಗೆ ತಂದಿದ್ದರು. 2017ರಲ್ಲಿ ಅಧಿಕಾರಕ್ಕೆ ಬಂದ ಟ್ರಂಪ್‌ ಮೊದಲ ವರ್ಷದ ದೀಪಾವಳಿಯನ್ನು ಆಯ್ದ ಭಾರತೀಯ ಸಮುದಾಯವನ್ನು ಶ್ವೇತ ಭವನಕ್ಕೆ ಕರೆಸಿ ಆಚರಿಸಿದ್ದರು. ಕಳೆದ ವರ್ಷ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನವತೇಜ್‌ ಸಿಂಗ್‌ ಅವರನ್ನು ತಮ್ಮ ಕಚೇರಿಗೆ ಬರಮಾಡಿಕೊಂಡು ದೀಪಾವಳಿ ಆಚರಿಸಲಾಗುತ್ತಿತ್ತು.

ಈ ತಿಂಗಳ ಆರಂಭದಲ್ಲಿ ದಸರಾ ಹಬ್ಬವನ್ನು ಅಮೆರಿಕದ 35 ಕಡೆಗಳಲ್ಲಿ ಆಚರಿಸಲಾಗಿತ್ತು. ಸುಂಆರು 7 ಸಾವಿರಕ್ಕೂ ಅಧಿಕ ಯುವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next