Advertisement

ಭಾರತದ ವಿರುದ್ಧ ಟ್ರಂಪ್‌ ಕಿಡಿ

01:25 AM Aug 15, 2019 | mahesh |

ವಾಷಿಂಗ್ಟನ್‌: ಭಾರತ ಮತ್ತು ಚೀನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲ. ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯೂಟಿಒ) ನೀಡುವ ರಿಯಾಯಿತಿಗಳನ್ನು ಆ ದೇಶಗಳು ಪಡೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ಅಮೆರಿಕ ಸರಕು ಮತ್ತು ಸೇವೆಗಳಿಗೆ ಭಾರತ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಟೀಕಿಸುತ್ತಿರುವ ಟ್ರಂಪ್‌ ಪೆನ್ಸಿಲ್ವೇನಿ ಯಾದಲ್ಲಿ ಮಾತನಾಡಿ ಏಷ್ಯಾದ ಎರಡು ದೊಡ್ಡ ಅರ್ಥ ವ್ಯವಸ್ಥೆಗಳಾದ ಚೀನ, ಭಾರತ, ವರ್ಷದಿಂದ ವರ್ಷಕ್ಕೆ ಡಬ್ಲ್ಯೂಟಿಒ ದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂಬ ನೆಲೆಯಲ್ಲಿ ರಿಯಾಯಿತಿ ಪಡೆದುಕೊಳ್ಳುತ್ತಿವೆ. ಇನ್ನು ಮುಂದೆ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next