Advertisement

ಎಚ್‌1ಬಿ ವೀಸಾ ಉದ್ಯೋಗಿಗಳಿಗೆ ಟ್ರಂಪ್‌ ಆಘಾತ!

01:43 AM Jan 15, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ಉದ್ಯೋಗಿಗಳ ರಕ್ಷಣೆಯ ನೆಪದಲ್ಲಿ ಎಚ್‌1ಬಿ ವೀಸಾ ಮೇಲೆ ನಿರ್ಬಂಧ ಹೇರಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ಅಧಿಕಾರದಿಂದ ಕೆಳಕ್ಕಿಳಿಯುವ ಮುನ್ನ ಮತ್ತೂಂದು ಆಘಾತ ನೀಡಿದ್ದಾರೆ. ಎಚ್‌1-ಬಿ ವೀಸಾ ಅಡಿಯಲ್ಲಿ ಅಮೆರಿಕನ್‌ ಕಂಪೆನಿಗಳು ಭಾರತ, ಚೀನ ಹಾಗೂ ಇತರೆ ರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಾತ್ಕಾಲಿಕವಾಗಿ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತವೆ. ಈಗ ಟ್ರಂಪ್‌ ಆಡಳಿತ, ಈ ಕಂಪೆನಿಗಳು ವಿದೇಶದ ಕೆಲಸಗಾರರಿಗೆ ನೀಡುವ ಕನಿಷ್ಠ ವೇತನ ಮಿತಿಯಲ್ಲಿ ಭಾರೀ ಏರಿಕೆ ಮಾಡುವಂಥ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

Advertisement

ಒಂದು ವೇಳೆ ಕನಿಷ್ಠ ವೇತನ ಮಿತಿಯಲ್ಲಿ ವಿಪರೀತ ಏರಿಕೆಯಾದರೆ, ಆಗ ಈ ಕಂಪೆನಿಗಳು ವಿದೇಶಿ ನಾಗರಿಕರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ ಎಂಬುದು ಈ ನಡೆಯ ಹಿಂದಿನ ತಂತ್ರ ಎನ್ನಲಾಗುತ್ತಿದೆ. ಆದರೆ ಜನವರಿ 20ರಂದು ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್‌, ಟ್ರಂಪ್‌ ಅವರ ವಲಸಿಗ ನೀತಿಗಳು ಕ್ರೂರವಾಗಿದ್ದು, ತಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಚ್‌-1ಬಿ ವೀಸಾ ಮೇಲಿನ ರದ್ದತಿಯನ್ನು ಹಿಂಪಡೆಯುವುದಾಗಿ ಈ ಹಿಂದೆಯೇ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next