Advertisement

ಚೀನ –ಅಮೆರಿಕ ಸುಂಕ ಸಮರ ನಿಲ್ಲಲು ಬೇಕು ವರ್ಷದ ಅವಧಿ

09:56 AM Dec 06, 2019 | Team Udayavani |

ಲಂಡನ್‌/ವಾಷಿಂಗ್ಟನ್‌: ವಿಶ್ವದ ಅರ್ಥ ವ್ಯವಸ್ಥೆಯ ಮೇಲೆ ಕರಾಳ ಛಾಯೆ ಮೂಡಿಸಿರುವ ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರ ನಿಲ್ಲಲು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆವರೆಗೆ ಕಾಯಲೇಬೇಕು. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಲಂಡನ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.

Advertisement

ಹೀಗಾಗಿ ಮುಂದಿನ ವಾರದಲ್ಲಿ ಸುಂಕ ಹೇರಿಕೆ ಬಗ್ಗೆ ಮೊದಲ ಹಂತದ ಮಾತುಕತೆ ನಡೆದು ವಿವಾದ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ‘ವಿವಾದ ಪರಿಹಾರಕ್ಕೆ ಗಡುವು ವಿಧಿಸಿಕೊಂಡಿಲ್ಲ. 2020ರಲ್ಲಿ ನಡೆಯುವ ಚುನಾವಣೆ ಮುಕ್ತಾಯವಾಗಲಿ’ ಎಂದು ಹೇಳಿದ್ದಾರೆ. ಸದ್ಯದ ಗಡುವಿನ ಪ್ರಕಾರ ಡಿ. 15ರ ಒಳಗಾಗಿ ಮೊದಲ ಹಂತದ ಮಾತುಕತೆ ನಡೆಯಬೇಕಾಗಿತ್ತು.

ಸಾಕ್ಷ್ಯವೇ ಸಿಕ್ಕಿಲ್ಲ: ಮತ್ತೂಂದು ಬೆಳವಣಿಗೆಯಲ್ಲಿ ಅಧ್ಯಕ್ಷ ಟ್ರಂಪ್‌ ವಿರುದ್ಧ ನಡೆಯುತ್ತಿರುವ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿ ಅಮೆರಿಕ ಸಂಸತ್‌ ನೀಡಿದ ವರದಿಯನ್ನು ಶ್ವೇತ ಭವನ ತಿರಸ್ಕರಿಸಿದೆ.

ಅಧ್ಯಕ್ಷರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲವೆಂದು ಅದು ಹೇಳಿದೆ. ಡೆಮಕ್ರಾಟ್‌ ಸಂಸದರು ಮತ್ತು ಸೆನೆಟ್‌ನ ನ್ಯಾಯಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಆ್ಯಡಮ್‌ ಸ್ಕಿಫ್ ಅಧ್ಯಕ್ಷರ ವಿರುದ್ಧದ ಆರೋಪ ಸಾಬೀತು ಮಾಡುವಲ್ಲಿ ವಿಫ‌ಲರಾಗಿದ್ದಾರೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next