Advertisement

ಕಡಿಮೆ ತೆರಿಗೆ ಕೊಟ್ಟ ಟ್ರಂಪ್‌: ದಾಖಲೆಗಳಲ್ಲಿ ಉಲ್ಲೇಖ

10:39 PM Dec 30, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅತ್ಯಲ್ಪ ಪ್ರಮಾಣದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ವಿಶೇಷವಾಗಿ ಅವರು ಅಧ್ಯಕ್ಷರಾಗಿದ್ದ ಮೊದಲ ಮತ್ತು ಕೊನೇಯ ವರ್ಷದಲ್ಲಿ ಕಡಿಮೆ ಪ್ರಮಾಣದ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

Advertisement

ಅಮೆರಿಕ ಸಂಸತ್‌ನ ಕೆಳಮನೆ ಕಾಂಗ್ರೆಸ್‌ನಲ್ಲಿರುವ ಆಡಳಿತ ಪಕ್ಷ ಡೆಮಾಕ್ರಾಟಿಕ್‌ ಪಾರ್ಟಿಯ ಸಂಸದ ಡಾನ್‌ ಬೈಯರ್‌ ನೇತೃತ್ವದಲ್ಲಿ 2015ರಿಂದ 2020ರ ವರೆಗೆ ಟ್ರಂಪ್‌ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದ ದಾಖಲೆಗಳ ವಿವರಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಜ.6ರಂದು ಅವರ ವಿರುದ್ಧ ಕ್ಯಾಪಿಟಲ್‌ ಹಿಲ್‌ ದಂಗೆಯ ಅಂತಿಮ ವರದಿ ಬಿಡುಗಡೆಯಾಗಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಭಾರೀ ಪ್ರತಿಕೂಲವಾಗಲಿದೆ
ಮಾಹಿತಿ ಬಿಡುಗಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ “ಇದರಿಂದ ಹಲವರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅದನ್ನು ಸುಪ್ರೀಂಕೋರ್ಟ್‌ ಕೂಡ ಒಪ್ಪಲಾರದು. ನಾನು ಎಷ್ಟು ಯಶಸ್ವಿಯಾಗಿದ್ದೆ ಎನ್ನುವುದು ದಾಖಲೆಗಳಿಂದ ಬಹಿರಂಗವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next