Advertisement

ಉನ್ನತ ನ್ಯಾಯಾಂಗ ಹುದ್ದೆಗೆ ಅಮುಲ್‌ ಥಾಪರ್‌: ಟ್ರಂಪ್‌ ನಾಮಕರಣ

12:37 PM Mar 21, 2017 | Team Udayavani |

ವಾಷಿಂಗ್ಟನ್‌ : 47ರ ಹರೆಯದ ಭಾರತೀಯ ಅಮೆರಿಕನ್‌ ಅಮುಲ್‌ ಥಾಪರ್‌ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೇಲ್ಮನವಿ ನ್ಯಾಯಾಲಯದ ಪ್ರಮುಖ ಹುದ್ದೆಗೆ ಸೂಚಿಸಿದ್ದಾರೆ. 

Advertisement

ಥಾಪರ್‌ ಅವರು 2007ರಲ್ಲಿ ದಕ್ಷಿಣ ಏಶ್ಯದ ಮೊತ್ತ ಮೊದಲ ಆರ್ಟಿಕಲ್‌ 3 ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬಳಿಕ ಕೆಂಟುಕಿ ಜಿಲ್ಲಾ  ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು ಇದೀಗ ಅಧ್ಯಕ್ಷ ಟ್ರಂಪ್‌ ಅವರಿಂದ ಉನ್ನತ ನ್ಯಾಯಾಂಗ ಹುದ್ದೆಗೆ ನಾಮಾಂಕಿತರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಥಾಪರ್‌ ಅವರ ನಾಮಾಂಕನ ದೃಢಪಟ್ಟಲ್ಲಿ ಅವರು ಕೆಂಟುಕಿ, ಟೆನಿಸೀ, ಒಹಾಯೋ ಮತ್ತು ಮಿಶಿಗಾನ್‌ನ ಮೇಲ್ಮನವಿಗಳ ವಿಚಾರಣೆ ನಡೆಸುವ ಅಮೆರಿಕದ 6ನೇ ಸರ್ಕ್ನೂಟ್‌ ಕೋರ್ಟ್‌ ಆಫ್ ಅಪೀಲ್ಸ್‌ನ ನ್ಯಾಯಾಧೀಶರಾಗುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next