Advertisement
30ರ ಹರೆಯದ ಆ ಬ್ಯಾಟ್ಸ್‌ಮನ್ ಅದ್ಯಾವುದಕ್ಕೂ ಜಗ್ಗಲಿಲ್ಲ. ಮೊದಲ ಟೆಸ್ಟ್ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ, ಬೈಯ್ದವರಿಂದಲೇ ಭೇಷ್ ಎನಿಸಿಕೊಂಡರು. ಹೀಯಾಳಿಸಿದ್ದ ಅಭಿಮಾನಿಗಳಿಂದಲೇ ಚಪ್ಪಾಳೆ ಗಿಟ್ಟಿಸಿ ಖುಷಿಯ ಕಡಲಲ್ಲಿ ತೇಲಿದ್ದರು. ಕಲಾತ್ಮಕ ಆಟದ ಮೂಲಕವೇ ಕ್ರಿಕೆಟ್ ಲೋಕದ ಹೃದಯ ಗೆದ್ದ ಆ ತಾರೆ, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್.
Related Articles
Advertisement
ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದರೂ ಸ್ಮಿತ್ ಸಂತೃಪ್ತರಾಗಿರಲಿಲ್ಲ. ಸಂತಸದಲ್ಲಿ ಮೈ ಮರೆತಿರಲೂ ಇಲ್ಲ. ಬದಲಾಗಿ ನೆಟ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಿದ್ದರು. ಆಟದ ಬಗ್ಗೆ ಹೊಂದಿದ್ದ ಈ ಬದ್ಧತೆಯೇ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ರೂಪುಗೊಳ್ಳಲು ಕಾರಣ’ ಎಂದು ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೌನ್ಸರ್ ಪೆಟ್ಟಿಗೂ ಅಂಜಲಿಲ್ಲಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜೋಫ್ರಾ ಆರ್ಚರ್ 77ನೇ ಓವರ್‌ನ ಎರಡನೇ ಎಸೆದ ಬೌನ್ಸರ್ ಸ್ಮಿತ್ ಅವರ ಕುತ್ತಿಗೆಗೆ ಬಡಿದಿತ್ತು. ನೋವು ಸಹಿಸಲಾರದ ಸ್ಮಿತ್ ಕ್ರೀಸ್‌ನಲ್ಲಿಯೇ ಕುಸಿದು ಬಿದ್ದಿದ್ದರು. ತಂಡದ ವೈದ್ಯಕೀಯ ಸಿಬ್ಬಂದಿ ಅವರನ್ನು ಅಂಗಳದ ಆಚೆ ಕರೆದುಕೊಂಡು ಹೋದರು. ಪೀಟರ್ ಸಿಡಲ್ ಔಟಾದ ನಂತರ ಮತ್ತೆ ಮೈದಾನಕ್ಕೆ ಮರಳಿದ್ದ ಸ್ಮಿತ್ ಬೆನ್ ಸ್ಟೋಕ್ಸ್ ಹಾಕಿದ 86ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್ ಅಲೆ ಏಳುವಂತೆ ಮಾಡಿದ್ದರು. 92ರನ್ ಗಳಿಸಿ ಔಟ್ ಆಗಿದ್ದರು. ಕುತ್ತಿಗೆಗೆ ಬಿದ್ದಿದ್ದ ಪೆಟ್ಟು ಗಂಭೀರ ಸ್ವರೂಪದ್ದಾಗಿದ್ದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಕಣಕ್ಕಿಳಿಯಲಿಲ್ಲ. ಮೂರನೇ ಟೆಸ್ಟ್‌ಗೆ ಅಲಭ್ಯರಾದರು. ಆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋತಿತು! ನಾಲ್ಕನೇ ಟೆಸ್ಟ್‌ನಲ್ಲಿ ಸ್ಮಿತ್ ಮತ್ತೆ ಪರಾಕ್ರಮ ಮೆರೆದರು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪರಿಣಾಮಕಾರಿ ಬ್ಯಾಟಿಂಗ್ ಮಾಡಿ ಮತ್ತೂಮ್ಮೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಜೊತೆಗೆ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದರು. ಈ ಹಾದಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಅಷ್ಟೇ ಅಲ್ಲದೆ ಟೆಸ್ಟ್‌ನಲ್ಲಿ ಅತಿ ವೇಗವಾಗಿ 26 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೂ ಭಾಜನರಾಗಿದ್ದರು. ಆ್ಯಶಸ್ ಸರಣಿಯಲ್ಲಿ ಸತತ ಎಂಟು ಅರ್ಧಶತಕ ಸಿಡಿಸಿದ ಹಿರಿಮೆಯೂ ಅವರದ್ದಾಗಿತ್ತು. ಒಟ್ಟಾರೆಯಾಗಿ ತನ್ನನ್ನು ಮೋಸಗಾರ ಎಂದು ಪದೇ ಪದೆ ಟೀಕಿಸುವವರ ನೆಲದಲ್ಲೆ ಸ್ಮಿತ್ ಈ ಸಾಧನೆ ಮಾಡಿರುವುದು ವಿಶೇಷ. ಅಭಿ