Advertisement

ತೆಲಂಗಾಣ; ಟಿಆರ್ ಎಸ್ ಮತ್ತೆ ಕಿಂಗ್, ಕಾಂಗ್ರೆಸ್ ಗೆ ಮುಖಭಂಗ

09:53 AM Dec 11, 2018 | Sharanya Alva |

ಹೈದರಾಬಾದ್: ಪಂಚರಾಜ್ಯಗಳ ಮತಎಣಿಕೆ ಪ್ರಕಾರ, ತೆಲಂಗಾಣದಲ್ಲಿ ನಿರೀಕ್ಷೆಯಂತೆ ಹಾಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) 90 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ.

Advertisement

ಪ್ರತ್ಯೇಕ ತೆಲಂಗಾಣ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಮೊದಲ ಬಾರಿಗೆ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆ.ಚಂದ್ರಶೇಖರ್ ರಾವ್ ಅವರು ಅವಧಿಗಿಂತ ಮೊದಲೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಸಜ್ಜಾಗಿದ್ದರು. ಕಳೆದ ಚುನಾವಣೆಯಲ್ಲಿ ಟಿಆರ್ ಎಸ್ 119 ಸದಸ್ಯ ಬಲ ಹೊಂದಿದ್ದ ವಿಧಾನಸಭೆಯಲ್ಲಿ 63 ಸ್ಥಾನ ಪಡೆದು ಅಧಿಕಾರಕ್ಕೇರಿತ್ತು. ಕಾಂಗ್ರೆಸ್ ಪಕ್ಷ 21 ಸ್ಥಾನ ಪಡೆದಿದ್ದು, ನಾಯ್ಡು ನೇತೃತ್ವದ ಟಿಡಿಪಿ 15 ಸ್ಥಾನ ಪಡೆದಿತ್ತು.

ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಮೈತ್ರಿ ಮೂಲಕವಾದರೂ ಸರ್ಕಾರ ರಚಿಸುವ ಕನಸು ಕಂಡಿತ್ತು. ಆದರೆ ತೆಲಂಗಾಣ ಮತದಾರರು ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದು, ಟಿಆರ್ ಎಸ್ 90 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಅಲ್ಲದೇ ಕಳೆದ ಬಾರಿಗಿಂತ 17 ಸ್ಥಾನಗಳನ್ನು ಹೆಚ್ಚಾಗಿ ಪಡೆದಿದೆ. ಕಾಂಗ್ರೆಸ್ ಪಕ್ಷ 22 ಸ್ಥಾನ ಹಾಗೂ ಬಿಜೆಪಿ 04 ಸ್ಥಾನ ಪಡೆದಿದೆ. ಪಕ್ಷೇತರರು 9 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next