Advertisement

ನೋಟು ಅಮಾನ್ಯ ಪರ-ವಿರೋಧ ರಹಿತ ನಿಲುವು: ಟಿಆರ್‌ಎಸ್‌

07:05 PM Nov 07, 2017 | Team Udayavani |

ಹೈದರಾಬಾದ್‌ : ಕೇಂದ್ರದ ನೋಟು ಅಮಾನ್ಯ ಕ್ರಮ ಒಂದು ವರ್ಷ ಪೂರೈಸುವ ಸಂದರ್ಭದಲ್ಲಿ ನಾಳೆ ಬುಧವಾರ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ‘ಕರಾಳ ದಿನ’ವನ್ನು ಆಚರಿಸಲಿವೆ; ವ್ಯತಿರಿಕ್ತವಾಗಿ ಬಿಜೆಪಿ “ಕಾಳಧನ ವಿರೋಧಿ ದಿನ’ವನ್ನು ಆಚರಿಸಲಿದೆ. ಆದರೆ ಒಂದು ಪಕ್ಷ ಮಾತ್ರ ತಟಸ್ಥವಾಗಿ ಉಳಿಯಲು ನಿರ್ಧರಿಸಿದೆ; ಅದೆಂದರೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌).

Advertisement

“ನಾವು ತಟಸ್ಥರು; ಮತ್ತು ನಾವು ಯಾವತ್ತೂ ತಟಸ್ಥರಾಗಿರುವವರು; ಏಕೆಂದರೆ ನಾವು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಮಾನ ದೂರವನ್ನು ಉಳಿಸಿಕೊಳ್ಳಲು ಬಯಸುತ್ತೇವೆ’ ಎಂದು ತೆಲಂಗಾಣ ಮುಖ್ಯಮಂತ್ರಿ  ಕೆ ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಹಾಗೂ ಲೋಕಸಭಾ ಸದಸ್ಯೆ ಕೆ. ಕವಿತಾ ಹೇಳಿದ್ದಾರೆ.

“ವಾಸ್ತವದಲ್ಲಿ ನೋಟು ಅಮಾನ್ಯ ಪ್ರಕೋಪದ ಸಂಕಷ್ಟಕ್ಕೆ ಜನಸಾಮಾನ್ಯರು, ಹಲವರು ದೂರುವಂತೆ,  ಅಷ್ಟಾಗಿ ಗುರಿಯಾಗಿಲ್ಲ ಎಂದು ಮುಖ್ಯಮಂತ್ರಿಗಳು ಈ ಹಿಂದೆಯೇ ಹೇಳಿದ್ದರು’ ಎಂದು ಕವಿತಾ ನೆನಪಿಸಿಕೊಟ್ಟರು. 

‘ನಾವು, ಅಂದರೆ ಟಿಆರ್‌ಎಸ್‌ ಸರಕಾರ, ನೋಟು ಅಮಾನ್ಯ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ತಿಳಿವಳಿಕೆ ಹುಟ್ಟಿಸುವ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ; ಜವಾಬ್ದಾರಿಯುತ ಸರಕಾರವಾಗಿ ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ನಾವು ಮಾಡಿದ್ದೇವೆ; ನಾವು ನಮ್ಮ ಜನರನ್ನು ಎಚ್ಚರಿಕೆಯಿಂದ ಅವಲೋಕಿಸುತ್ತಿದ್ದೇವೆ ಎಂದು ಕವಿತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next