Advertisement
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಕೆಲ ತಾಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಏನ್ರಿ ಸಾಹೇಬರೇ ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ. ಯೋಜನೆ ನಮ್ಮೂರಿನಲ್ಲಿ ಶೇ.30 ರಷ್ಟು ಕಾರ್ಯರೂಪಕ್ಕೆ ಬಂದಿಲ್ಲ.
Related Articles
Advertisement
ಜೊತೆಗೆ ಇಲಾಖೆಯಿಂದ ರೈತರಿಗೆ ನೀಡಿರುವ ರೇಷ್ಮೆ ಪರಿಕರ ತುಂಬಾ ಕಳಪೆ ಗುಣಮಟ್ಟದ್ದಾಗಿವೆ. 5 ಸಾವಿರ ರೂ., ಮುಖ ಬೆಲೆ ಮೋಟರ್ ಗೆ 25 ಸಾವಿರ ರೂ. ಬಿಲ್ ಹಾಕಿದ್ದೀರಿ ಹೇಗೆ ಎಂದು ಹಿಗ್ಗಾಮುಗ್ಗಾ ತರಟೆ ತಗೆದುಕೊಂಡರು. ನಂತರ ಸಭೆಗೆ ಬಂದ ಅಧಿಕಾರಿ ಮಾತನಾಡಿ, ರೇಷ್ಮೆ ಬೆಳೆ 3ಬಾರಿಯೂ ಕೈಕೊಡಲು ಜಾಗದ ತೊಂದರೆ ಇರಬಹುದು. ಇನ್ನೂ ರೇಷ್ಮೆ ಚಂದ್ರಿಕೆ ಸೇರಿದಂತೆ ಪರಿಕರ ಕಳಪೆಯಾಗಿರುವುದು ಕಂಡು ಬಂದಿದೆ ಎಂದರು.
ತಾಪಂ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಬೇಗೌಡ, ಸದಸ್ಯರಾದ ಅಂಕನಾಯ್ಕ, ಸುಂದರನಾಯ್ಕ, ಸ್ಟ್ಯಾನಿ ಬಿಟ್ಟೋ, ಬಿ.ಸಿ.ರಾಜು, ಸೇರಿದಂತೆ ಎಲ್ಲಾ ಸದಸ್ಯರಿದ್ದರು. ತಾಲೂಕು ಅಧಿಕಾರಿಗಳಾದ ಕೃಷಿ ಅಧಿಕಾರಿ ಜಯರಾಮಯ್ಯ, ತೋಟಗಾರಿಕೆ ಅಧಿಕಾರಿ ಸಿದ್ದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ, ತಾಪಂ ಇಒ ಶ್ರೀಕಂಠರಾಜೇಅರಸ್, ತಾಲೂಕು ಅರಣ್ಯಾಧಿಕಾರಿ ಗೀತಾಮಣಿ, ಎಇಇ ಸುನೀಲ್, ಪ್ರದೀಪ್, ತಾಪಂ ಸಿಬ್ಬಂದಿ ಮಂಜುನಾಥ್, ಗುರು, ಸಿದ್ದು, ನಂಜುಂಡಸ್ವಾಮಿ ಇದ್ದರು.
ತಾಲೂಕಿನಲ್ಲಿ ಲ್ಯಾಬ್‌ಗಳು ಮತ್ತು ಕ್ಲಿನಿಕ್‌ಗಳು ಸೇರಿ ಒಟ್ಟು 42 ನಕಲಿ ಕ್ಲಿನಿಕ್‌ಗಳು ಇದ್ದು, ಎಲ್ಲಾ ಕಡೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಮುಂದೆ 2 ತಿಂಗಳಿಗೊಮ್ಮೆ ಭೇಟಿ ನೀಡಿ ನಕಲಿ ವೈದ್ಯರು ತಾಲೂಕಿನಲ್ಲಿ ಕಂಡು ಬಾರದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.-ಡಾ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ