ಸುಮಾರು ಮೂರು ವರ್ಷಗಳ ಹಿಂದೆ ಕೆಬಿಜಿಎನ್ ಎಲ್ ವತಿಯಿಂದ ಖಡೀಕರಣ ಮಾಡಲಾಗಿತ್ತು. ಆದರೆ ರಸ್ತೆ ದುರಸ್ತಿ ಮಾಡಿದ ಆರು ತಿಂಗಳುಗಳಲ್ಲಿ ಅದು ಕಿತ್ತು ಹೋಗಿ, ದಾರಿ ತುಂಬೆಲ್ಲ ಕಲ್ಲು ಬಂಡೆಗಳು ತುಂಬಿಕೊಂಡಿವೆ. ರಸ್ತೆ ಇಕ್ಕೆಲೆಗಳಲ್ಲಿ ಬೆಳೆದು ನಿಂತ ಜಾಲಿ ಮುಳ್ಳು ಕಂಟಿಗಳು ರಸ್ತೆ ಆವರಸಿರುವುದರಿಂದ ಈ ಮಾರ್ಗದ ಮೂಲಕ ಹಾದು ಹೋಗುವ ವಾಹನ ಸವಾರರು, ಪಾದಚಾರಿಗಳು ರೈತರು ಹಿಡಿಶಾಪ ಹಾಕುವಂತಾಗಿದೆ.
Advertisement
ರಸ್ತೆ ಮಧ್ಯದಲ್ಲಿರುವ ಹಳ್ಳದಲ್ಲಿ ನಿರಂತರ ನೀರು ಹರಿಯುತ್ತದೆ. ಮಳೆಗಾಲ ಬಂತೆಂದರೆ ಸಾಕು, ವಿದ್ಯಾರ್ಥಿಗಳು ಶಾಲೆಗೆ ಬರುವುದೇ ದುಸ್ತರವಾಗಿದೆ. ಹಲಸಂಗಿ ಗ್ರಾಮಕ್ಕೆ ಸೈಕಲ್ ಮೂಲಕ ಬರುವ ಅಡವಿ ವಸ್ತಿ ಹಾಗೂ ನಂದ್ರಾಳ ಗ್ರಾಮದ ಶಾಲಾ ವಿದ್ಯಾರ್ಥಿಗಳು ಶಾಲೆ ತಲುಪವುದೇ ಪಾಲಕರಿಗೆ ದೊಡ್ಡ ಚಿಂತೆಯಾಗಿದೆ. ಈ ರಸ್ತೆ ಡಾಂಬರೀಕರಣ ಮಾಡುವಂತೆ ಸ್ಥಳಿಯ ಗ್ರಾಪಂ ಮತ್ತೆ ಕಳೆದ ಸಾಲಿನಲ್ಲಿ ಸುಮಾರು 3.50 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿ ಮತ್ತೆ ಕೆಬಿಜಿಎನ್‌ಎಲ್ ಇಲಾಖೆಗೆ ಕಳುಹಿಸಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಭಾಗದ ಜನಪ್ರತಿನಿಧಿಗಳು, ಶಾಸಕರಿಗೆ ಮನವಿ ಸಲ್ಲಿಸಿದರೂ ಯರೋಬ್ಬರೂ ಸ್ಪಂದಿಸುತ್ತಿಲ್ಲ ಎಂಬುದು ನಂದ್ರಾಳ ಗ್ರಾಮಸ್ಥರ ಆರೋಪವಾಗಿದೆ.