Advertisement
ನಗರದ ಎಪಿಎಂಸಿ ಬನ್ನಿಗಿಡ ಕ್ಯಾಂಪ್ ಸೇರಿದಂತೆ ಮೇಲ್ಭಾಗದ ಮಳೆ ನೀರು ಮತ್ತು ಚರಂಡಿ ನೀರು ನಗರದ ಖಬರಸ್ಥಾನ ಮಧ್ಯಭಾಗದಲ್ಲಿರುವ ರಾಜಕಾಲುವೆಯ ಮಾರ್ಗವಾಗಿ ದುರುಗಮ್ಮನ ಹಳ್ಳ ಸೇರುತ್ತದೆ. ಜುಲೈ ನಗರಕ್ಕೆ ಹೋಗುವ ರಸ್ತೆ ಮಧ್ಯೆ ಇರುವ ಈ ರಾಜ ಕಾಲುವೆ ಮೇಲ್ಭಾಗದಲ್ಲಿ ಇತ್ತೀಚೆಗೆ ಶಾಪಿಂಗ್ ಕಾಂಪ್ಲೆಕ್ಸ್ ಒಂದನ್ನು ನಿರ್ಮಿಸಲಾಗಿದೆ. ಸ್ಥಳೀಯರ ಆಕ್ಷೇಪದ ಹಿನ್ನೆಲೆಯಲ್ಲಿ ಈ ಮಳಿಗೆ ತೆರವುಗೊಳಿಸಲು ಕಳೆದ ಮೂರು ತಿಂಗಳ ಹಿಂದೆ ನಗರಸಭೆಯವರು ಯತ್ನಿಸಿದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳ ಒತ್ತಡದಿಂದಾಗಿ ತೆರವು ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಸುರಿದ ಅಕಾಲಿಕ, ಸತತ ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿದ್ದರಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿ ರಾಜಕಾಲುವೆಗಳ ಒತ್ತುವರಿ ಮಾಡಿರುವ ಕಟ್ಟಡಗಳನ್ನು ಕೂಡಲೇ ತೆರವು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು.
Related Articles
Advertisement
ಎರಡು ದಿನ ಕಾಲಾವಕಾಶ: ರಾಜಕಾಲುವೆ ಮೇಲೆ ನಿರ್ಮಿಸಿದ ವಾಣಿಜ್ಯ ಮಳಿಗೆಯನ್ನು ತೆರವು ಕಾರ್ಯಾಚರಣೆ ಈ ಹಿಂದೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೆಲವರ ಮನವಿಯ ಮೇರೆಗೆ ಕಾರ್ಯಾಚರಣೆ ಇಳಿಸಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಜುಲೈ ನಗರದ ರಾಜಕಾಲುವೆ ನಿರ್ಮಿಸಿದ ವಾಣಿಜ್ಯ ಮಳಿಗೆಯನ್ನು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಖಬರಸ್ಥಾನ ಸಮಿತಿಯವರು ಮತ್ತು ಕೆಲ ಮುಖಂಡರ ಮನವಿ ಮೇರೆಗೆ ಈ ಕಾರ್ಯಾಚರಣೆಯನ್ನು ಎರಡು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ. ರಸ್ತೆ ನದಿ ಹಳ್ಳ ಕೊಳ್ಳ ರಾಜಕಾಲುವೆ ನೈಸರ್ಗಿಕವಾಗಿದ್ದು, ಇವುಗಳ ಮೇಲೆ ಯಾವುದೇ ಕಟ್ಟಡಗಳ ನಿರ್ಮಿಸಬಾರದು. ಇದರಿಂದ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆಯಿದೆ. ಗಂಗಾವತಿ ನಗರದಲ್ಲಿ ಚರಂಡಿ ರಾಜಕಾಲುವೆ ಮತ್ತು ಹಳ್ಳದ ಒತ್ತುವರಿ ಬಗ್ಗೆ ದೂರುಗಳಿದ್ದು ಶೀಘ್ರದಲ್ಲೇ ಎಲ್ಲಾ ಕಡೆ ಕಾರ್ಯಾಚರಣೆ ಮಾಡಿ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.