Advertisement
ನಿತ್ಯ ಸಾವಿರಾರು ವಾಹನಗಳ ದಟ್ಟಣೆ ಹೊಂದಿದ ನಂ. 218ರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ತಾಲೂಕಿನ ಕೊಣ್ಣೂರ ಬಳಿಯ ಮಲಪ್ರಭಾ ನದಿ ಸೇತುವೆ ಅಕ್ಕಪಕ್ಕ ಈ ಪರಿಸ್ಥಿತಿಯಿದೆ.
Related Articles
Advertisement
ಹಳೆ ಸೇತುವೆ ಬಂದ್: ಹೊಸ ಸೇತುವೆ ಪಕ್ಕದಲ್ಲೇ ಹಳೆಯ ಸೇತುವೆ ಸಂಪರ್ಕ ರಸ್ತೆಯೂ ಸ್ಥಗಿತದಿಂದ ಎಲ್ಲ ವಾಹನಗಳೂ ಇದೇ ಎಡರು ತೊಡರಿನ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಹಗಲು ರಾತ್ರಿಯೆನ್ನದೇ ವಾಹನ ದಟ್ಟಣೆಯಷ್ಟೇ ಸಂಚಾರವೂ ಕಷ್ಟಕರವಾಗಿ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನರಗುಂದ ಉಪ ವಿಭಾಗ ಈ ಸಮಸ್ಯೆಗೆ ಯಾವಾಗ ಮುಕ್ತಿ ಹಾಡುವುದೋ ಕಾಯ್ದುನೋಡಬೇಕಿದೆ.
ಕಮಾನು ನಿರ್ಮಾಣಕ್ಕೆ ಕ್ರಿಯಾಯೋಜನೆ: ಕೊಣ್ಣೂರ ಗ್ರಾಮದಿಂದ ಸೇತುವೆ ಸಂಪರ್ಕಿಸುವ ಹೆದ್ದಾರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಇಲ್ಲಿ ಕಮಾನು ನಿರ್ಮಿಸುವ ಕ್ರಿಯಾಯೋಜನೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ತಯಾರಿಸಿದ್ದಾರೆ. ಆ. 8ರಂದು ಪ್ರವಾಹ ಉಕ್ಕಿಹರಿದ ಬಳಿಕ ಹೆದ್ದಾರಿ ದುರಸ್ತಿಗೆ 99 ಲಕ್ಷ ವೆಚ್ಚ ಕ್ರಿಯಾಯೋಜನೆ ಸಲ್ಲಿಸಿ ಸರಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಬಳಿಕ ಮತ್ತೇ ಎರಡು ಬಾರಿ ಪ್ರವಾಹದಿಂದ ಶಾಶ್ವತ ಪರಿಹಾರಕ್ಕಾಗಿ ಈ ಭಾಗದಲ್ಲಿ 60 ಮೀ. ಉದ್ದ, 4 ಅಡಿ ಎತ್ತರ ಕಮಾನು ಮೂಲಕ ಹೆದ್ದಾರಿ ಸುಧಾರಣೆಗೆ 2.30 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಿದ್ದು, ಅನುಮೋದನೆ ದೊರಕಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
99 ಲಕ್ಷ ವೆಚ್ಚದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. ಶಾಶ್ವತ ಪರಿಹಾರ ದೃಷ್ಟಿಯಿಂದ ಬಾಕ್ಸ್ ಕನ್ವರ್ಟ್ ಕ್ರಿಯಾಯೋಜನೆ ತಯಾರಿಸಿ 2.30 ಕೋಟಿ ವೆಚ್ಚದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನೂ ಅನುಮೋದನೆ ದೊರಕಿಲ್ಲ. – ರಾಜೇಂದ್ರ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಎಇಇ
-ಸಿದ್ಧಲಿಂಗಯ್ಯ ಮಣ್ಣೂರಮಠ