ಕೋಟ: ಅಕಾಲಿಕವಾಗಿ ಸುರಿದ ಮಳೆಗೆ ನೆಲಗಡಲೆ ಮುಂತಾದ ದ್ವಿದಳ ಧಾನ್ಯದ ಬೆಳೆಗಳಿಗೆ ಹಾನಿಯಾಗಿದೆ.
ಸುಮಾರು 30 ದಿನಗಳ ಹಿಂದೆ ಬಿತ್ತನೆ ಮಾಡಿದ ನೆಲಗಡಲೆ ಬೀಜ ಇದೀಗ ಹೂ ಬಿಡುವ ಹಂತದಲ್ಲಿದ್ದು, ಮಳೆ ಬಂದುದ ರಿಂದ ತೇವಾಂಶ ಹೆಚ್ಚಿ ಹೂವಿನ ಮೇಲೆ ಪರಿಣಾಮ ಬೀರಲಿವೆ ಹಾಗೂ ಗಿಡ ಅಗತ್ಯಕ್ಕಿಂತ ಎತ್ತರಕ್ಕೆ ಬೆಳೆದು ಫಸಲಿಗೆ ಹಿನ್ನಡೆಯಾಗಲಿದೆ. ಇದೇ ರೀತಿ ಉದ್ದು, ಹುರುಳಿ ಮುಂತಾದ ದ್ವಿದಳ ಧಾನ್ಯಗಳ ಬೆಳೆಗೂ ಅಡ್ಡಿಯಾಗಿವೆ.
ರೈತರ ಮೊಗದಲ್ಲಿ ಆತಂಕ :
ಪ್ರಸ್ತುತ ವರ್ಷ ದ್ವಿದಳ ಧಾನ್ಯ ಬೆಳೆಯುವ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆಯಾ ಗಿದ್ದು ಅಕಾಲಿಕ ಮಳೆಯಿಂದ ಫಸಲಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ರೈತರ ಮೊಗದಲ್ಲಿ ಆತಂಕದ ಕರಿಛಾಯೆ ಮೂಡಿದೆ.
ಅಕಾಲಿಕ ಮಳೆಯಿಂದಾಗಿ ದ್ವಿದಳ ಧಾನ್ಯಗಳ ಮೇಲೆ ಮಾರಕ ಪರಿಣಾಮ ಉಂಟಾಗಿದೆ. ಆದ್ದರಿಂದ ಬೆಳೆಗಳ ಪೋಷಣೆ ಕುರಿತು ರೈತರು ಹೆಚ್ಚಿನ ಗಮನಹರಿಸುವುದು ಅಗತ್ಯ ಹಾಗೂ ಫಸಲು ನಷ್ಟವಾಗದಂತೆ ತಡೆಯಲು ಪೂರಕ ಕ್ರಮ ಕೈಗೊಳ್ಳುವ ಅಗತ್ಯವಿದೆ.
–ಡಾ| ನವೀನ್, ಬೇಸಾಯ ತಜ್ಞರು, ಕೆ.ವಿ.ಕೆ. ಬ್ರಹ್ಮಾವರ