Advertisement

ಭಾರತ- ಬಾಂಗ್ಲಾ ಗಡಿಯಲ್ಲಿ ಯೋಧರಿಂದ ದೀಪಾವಳಿ ಆಚರಣೆ

09:47 AM Oct 27, 2019 | keerthan |

ಅಗರ್ತಲಾ: ಭಾರತೀಯ ಗಡಿ ರಕ್ಷಣಾ ಪಡೆ ಯೋಧರು ಬಾಂಗ್ಲಾ ಗಡಿಯಲ್ಲಿ ಬಾಂಗ್ಲಾದೇಶ ಗಡಿ ರಕ್ಷಣಾ ಯೋಧರ ಜೊತೆ ದೀಪಾವಳಿ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಶುಕ್ರವಾರ ರಾತ್ರಿ ಅಖೌರ ಚೆಕ್ ಪೋಸ್ಟ್ ಬಳಿ ಯೋಧರು ದೀಪಾವಳಿ ಸಿಹಿ ಹಂಚಿದರು.

Advertisement

ದೀಪಾವಳಿಗೆ ಮೊದಲೇ ಎರಡು ಮಿತ್ರ ರಾಷ್ಟ್ರಗಳ ನಡುವಿನ ಈ ನಡೆ ಉತ್ತಮ ಬಾಂಧವ್ಯವನ್ನು ಸೂಚಿಸುತ್ತದೆ.

ಈ ದೀಪಾವಳಿ ಆಚರಣೆ ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಸುತ್ತದೆ. ಇದು ಗಡಿ ಭಾಗದ ಹಿಂಸಾಚಾರವನ್ನು ಕಡಿಮೆಗೊಳಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದು ಬಾಂಗ್ಲಾದ ಬಿಜಿಬಿ ಕಮಾಂಡರ್ ಜಹಾಂಗೀರ್ ಅಲಾಂ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next