Advertisement

ರಗಡ್‌ ಲುಕ್‌ನಲ್ಲಿ ಕ್ರೇಜಿಸನ್‌!

08:03 PM Aug 26, 2020 | Suhan S |

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ವಿಕ್ರಂ ರವಿಚಂದ್ರನ್‌ ಅಭಿನಯದ ಚೊಚ್ಚಲ ಚಿತ್ರ “ತ್ರಿವಿಕ್ರಮ’ ಸದ್ಯ ತೆರೆಗೆ ಬರಲು ರೆಡಿಯಾಗುತ್ತಿದೆ. ವಿಕ್ರಂ ರವಿಚಂದ್ರನ್‌ ಈ ಚಿತ್ರದಲ್ಲಿ ಆ್ಯಕ್ಷನ್‌ ಕಂ ಲವರ್‌ ಬಾಯ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಇದರ ಬೆನ್ನಲ್ಲೆ ವಿಕ್ರಂ ರವಿಚಂದ್ರನ್‌ ಅಭಿನಯಿಸುತ್ತಿರುವ ಎರಡನೇ ಚಿತ್ರ ಕೂಡ ಅನೌನ್ಸ್‌ ಆಗಿದೆ.

Advertisement

ಹೌದು, ವಿಕ್ರಂ ರವಿಚಂದ್ರನ್‌ ನಾಯಕನಾಗಿರುವ ಮೊದಲ ಚಿತ್ರ ತೆರೆಗೆ ಬರುವ ಮುನ್ನವೇ, ಎರಡನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಿಯಾಮಣಿ ಅಭಿನಯಿಸಿದ್ದ, ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹಿನ್ನೆಲೆ ಧ್ವನಿ ನೀಡಿದ್ದ “ವೈಟ್‌’ ಕಿರುಚಿತ್ರವನ್ನು ನಿರ್ದೇಶಿಸಿದ್ದ ಮನು ನಾಗ್‌ ಈ ಹೊಸಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಕನ್ನಡ ಹಾಗೂ ಮಲೆಯಾಳಂನ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವವಿರುವ ಮನು ನಾಗ್‌ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ಮತ್ತಿತರ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ವಿಕ್ರಂ ರವಿಚಂದ್ರನ್‌ ಹೊಸಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಸದ್ಯ ಈ ಚಿತ್ರದ ಬಾಕಿ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಚೆನ್ನೈ ಮೂಲದ ನಿರ್ಮಾಪಕರೊಬ್ಬರು ಈ ಚಿತ್ರವನ್ನು ನಿರ್ಮಿ ಸು ತ್ತಿ ದ್ದಾರೆ. ಕೆಲ ದಿನಗಳಲ್ಲಿ ಚಿತ್ರದ ಟೈಟಲ್‌, ನಾಯಕಿ, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಇನ್ನು ಮೊದಲ ಚಿತ್ರ “ತ್ರಿವಿಕ್ರಮ’ನಲ್ಲಿ ಆ್ಯಕ್ಷನ್‌ ಹೀರೋ ಕಂ ಲವರ್‌ಬಾಯ್‌ ಲುಕ್‌ನಲ್ಲಿ ಕಾಣಿಸಿ ಕೊಳ್ಳುತ್ತಿರುವ ವಿಕ್ರಂ ರವಿಚಂದ್ರನ್‌, ಈ ಚಿತ್ರದಲ್ಲಿ ಕಂಪ್ಲೀಟ್‌ ರಗಡ್‌ ಆ್ಯಂಡ್‌ ರಾ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಔಟ್‌ ಆ್ಯಂಡ್‌ ಔಟ್‌ ಮಾಸ್‌ ಕಥಾಹಂದರವಿರುವ ಈ ಚಿತ್ರದಲ್ಲಿ ಸಾಕಷ್ಟು ಸೆಂಟಿಮೆಂಟ್‌ ಸನ್ನಿವೇಶಗಳು ಕೂಡ ಇರಲಿದ್ದು, ತಾಯಿ ಹಾಗೂ ಮಗನ ನಡುವಿನ ಬಾಂಧವ್ಯ ಚಿತ್ರದ ಹೈಲೈಟ್‌ ಎನ್ನುತ್ತದೆ ಚಿತ್ರತಂಡ. ­

Advertisement

Udayavani is now on Telegram. Click here to join our channel and stay updated with the latest news.

Next