Advertisement

ರಾಜಸ್ತಾನದಲ್ಲಿ “ತ್ರಿವಿಕ್ರಮ’

10:02 AM Dec 17, 2019 | Team Udayavani |

ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ “ತ್ರಿವಿಕ್ರಮ’ ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ, ಇದೀಗ ರಾಜಸ್ತಾನದತ್ತ ತನ್ನ ಪಯಣ ಬೆಳೆಸಿದ್ದಲ್ಲದೆ, ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ.

Advertisement

ಸಹನಾಮೂರ್ತಿ ನಿರ್ದೇಶನದ “ತ್ರಿವಿಕ್ರಮ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಕೊರೆಯುವ ಚಳಿಯ ನಡುವೆಯೂ ಕೊಡಚಾದ್ರಿಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ನಡೆದಿತ್ತು. ಈಗ ರಾಜಸ್ಥಾನದ ಮರಳುಗಾಡು ಪ್ರದೇಶದಲ್ಲಿ ಬಿಸಿಲು ಧಗೆಯಲ್ಲೇ ಚಿತ್ರೀಕರಣ ನಡೆಸುತ್ತಿದೆ. ಅಂದಹಾಗೆ, ಇದುವರೆಗೆ ಮಾತಿನ ಭಾಗ, ಹಾಡು, ಫೈಟು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. “ತ್ರಿವಿಕ್ರಮ’ ಶುರುವಿಗೆ ಮುನ್ನವೇ ಜೋರು ಸುದ್ದಿ ಮಾಡಿತ್ತು.

ಚಿತ್ರಕ್ಕೆ ಆಕಾಂಕ್ಷ ಹಾಗು ಅಕ್ಷರಗೌಡ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪಕ್ಕಾ ಲವ್‌ಸ್ಟೋರಿ ಹೊಂದಿ ದ್ದು, ತಾಯಿ ಸೆಂಟಿಮೆಂಟ್‌, ಎಮೋಷನ್ಸ್‌ ಹಾಗು ಒಂದಷ್ಟು ಗೆಳೆತನ ಇತ್ಯಾದಿ ಅಂಶಗಳು ಚಿತ್ರದಲ್ಲಿವೆ. ಚಿತ್ರದಲ್ಲಿ ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್‌ ಇತರರು ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯಾ ಅವರ ಸಂಗೀತವಿದೆ. ಸೋಮಣ್ಣ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next