Advertisement

ತ್ರಿವಳಿ ತಲಾಖ್‌ ರದ್ದು: ಕಾಂಗ್ರೆಸ್‌

12:40 AM Feb 08, 2019 | |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ತ್ರಿವಳಿ ತಲಾಖ್‌ ಕಾನೂನನ್ನು ರದ್ದು ಮಾಡುವುದಾಗಿ ಘೋಷಿಸುವ ಮೂಲಕ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ವಿವಾದ ಸೃಷ್ಟಿಸಿದ್ದಾರೆ. 

Advertisement

ಗುರುವಾರ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗದ ಸಮಾವೇಶದಲ್ಲಿ ಅವರು ಈ ಆಶ್ವಾಸನೆ ನೀಡಿದ್ದಾರೆ. ತ್ರಿವಳಿ ತಲಾಖ್‌ ಕಾನೂನಿನ ಮೂಲಕ ಮುಸ್ಲಿಂ ಪುರುಷರ ವಿರುದ್ಧ  ಮುಸ್ಲಿಂ ಮಹಿಳೆಯರನ್ನು ಪ್ರಧಾನಿ ಮೋದಿ ಛೂ ಬಿಟ್ಟಿದ್ದಾರೆ. ಮುಸ್ಲಿಂ ಪುರುಷರನ್ನು ಜೈಲಿಗೆ ಕಳುಹಿಸಲು,  ಪೊಲೀಸ್‌ ಠಾಣೆಗಳನ್ನು ಅಲೆದಾಡುವಂತೆ ಮಾಡಲು  ಮೋದಿ ಹೆಣೆದ ತಂತ್ರವಿದು ಎಂದಿದ್ದಾರೆ ಸುಷ್ಮಿತಾ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಮುಸ್ಲಿಮರನ್ನು ಓಲೈಸಲು ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ. ಕಾಂಗ್ರೆಸ್‌ ಅನ್ನು ಮುಸ್ಲಿಂ ಮಹಿಳೆಯರು ಯಾವತ್ತೂ ಕ್ಷಮಿಸುವುದಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next