Advertisement

ಟ್ರೈಂಫ್ ಸ್ಟ್ರೀಟ್ ಸ್ಕ್ಯಾಂಬ್ಲರ್ ಬಿಡುಗಡೆ

04:09 PM Oct 13, 2021 | Team Udayavani |

ನವದೆಹಲಿ:ಟ್ರೈಂಫ್ ಮೋಟಾರ್‌ ಸೈಕಲ್‌ ಸಂಸ್ಥೆಯು ಟ್ರಿಯಂಪ್‌ ಸ್ಟ್ರೀಟ್‌ ಸ್ಕ್ಯಾಂಬ್ಲರ್ ಬೈಕನ್ನು ಬಿಡುಗಡೆ ಮಾಡಿದೆ. ಈ ಬೈಕು 900ಸಿಸಿ ಪ್ಯಾರೆಲಲ್‌ ಟ್ವಿನ್‌ ಇಂಜಿನ್‌ ಹೊಂದಿದೆ. ಜೆಟ್‌ ಬ್ಲಾಕ್‌, ಅರ್ಬನ್‌ ಗ್ರೇ, ಡುಯಲ್‌ ಟೋನ್‌ ಮ್ಯಾಟ್‌ ಖಾಕಿ ಮತ್ತು ಮ್ಯಾಟ್‌ ಐರನ್‌ಸ್ಟೋನ್‌ ಎಂಬ ಬಣ್ಣಗಳು ಇದರಲ್ಲಿ ಲಭ್ಯ.

Advertisement

5 ಗೇರ್‌ ಟ್ರಾನ್ಸ್‌ಮಿಷನ್‌ ಇರುವ ಈ ಬೈಕ್‌ನ ಬೆಲೆ 9.35 ಲಕ್ಷ ರೂ.(ಎಕ್ಸ್‌ ಶೋ ರೂಂ). ಸಂಸ್ಥೆಯು ತನ್ನ ಬಿಎಸ್‌4 ಬೈಕಿಗಿಂತ ಈ ಬೈಕಿನ ಬೆಲೆಯಲ್ಲಿ 80 ಸಾವಿರ ರೂ. ಹೆಚ್ಚಳ ಮಾಡಿದೆ.

ಇದನ್ನೂ ಓದಿ:ಅಪ್ರಾಪ್ತ ಮಗಳ ಮೇಲೆ ಸತತ ಅತ್ಯಾಚಾರ; ತಂದೆ ಸೇರಿ 28 ಮಂದಿ ಬಂಧನ

ದಶಮಿಯಂದು 7ರಕ್ಷಣಾ ಪಿಎಸ್‌ಯುಗೆ ಚಾಲನೆ
ಏಳು ಹೊಸ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ಇದೇ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ದೇಶದ ರಕ್ಷಣಾ ಉತ್ಪಾದನಾ ವಲಯದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆರ್ಡನನ್ಸ್‌ ಫ್ಯಾಕ್ಟರಿ ಬೋರ್ಡ್‌ (ಒಎಫ್ಬಿ) ಅನ್ನು ವಿಸರ್ಜಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದ 4 ತಿಂಗಳಲ್ಲೇ ಈ ಬೆಳವಣಿಗೆ ನಡೆದಿದೆ.

ಒಎಫ್ಬಿ ವ್ಯಾಪ್ತಿಯಲ್ಲಿದ್ದ 41 ಫ್ಯಾಕ್ಟರಿಗಳನ್ನು ವಿಭಜಿಸಿ ರಚಿಸಲಾದ ಈ 7 ಪಿಎಸ್‌ಯುಗಳನ್ನು ವಿಜಯದಶಮಿ ದಿನ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಪಿಎಸ್‌ಯುಗಳಿಗಾಗಿ ಬರೋಬ್ಬರಿ 65 ಸಾವಿರ ಕೋಟಿ ರೂ.ಗಳ ಕಾಂಟ್ರ್ಯಾಕ್ಟ್ಗಳಿಗೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ.

Advertisement

ಈ ಕಂಪನಿಗಳು ದೇಶದ ರಕ್ಷಣೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ವಾಹನಗಳು, ಅಸ್ತ್ರಗಳು ಹಾಗೂ ಇತರೆ ಸಲಕರಣೆಗಳು, ಸೇನಾಪಡೆಗಳಿಗೆ ಬೇಕಾಗುವ ವಸ್ತುಗಳು, ಆಪ್ಟೋ- ಎಲೆಕ್ಟ್ರಾನಿಕ್ಸ್‌ ಗೇರ್‌ಗಳು, ಪ್ಯಾರಾಚೂಟ್‌ನಂತಹ ಉತ್ಪನ್ನಗಳನ್ನು ತಯಾರಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next