Advertisement
ಇತ್ತೀಚೆಗಷ್ಟೇ ಸಂಗೀತ ದಿಗ್ಗಜ ಇಳಯರಾಜ ಬಯೋಪಿಕ್ ಅನೌನ್ಸ್ ಆಗಿದೆ. ಇದರಲ್ಲಿ ನಟ ಧನುಷ್ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಪ್ರಧಾನಿ ಮೋದಿ ಅವರ ಬಯೋಪಿಕ್ ಸೆಟ್ಟೇರಲಿದೆ ಎನ್ನುವ ಸುದ್ದಿಯೊಂದು ದಕ್ಷಿಣ ಸಿನಿರಂಗದಲ್ಲಿ ಹರಿದಾಡಿದೆ. ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಸತ್ಯರಾಜ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
Related Articles
Advertisement
ಇದೀಗ ಚಿತ್ರತಂಡ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಮಾಡುವ ಕಲಾವಿದರ ಹುಡುಕಾಟದಲ್ಲಿ ನಿರತರಾಗಿದೆ. ದಕ್ಷಿಣ ಭಾರತದಲ್ಲಿ ಸದ್ಯ ಯಶಸ್ಸಿನ ಹಾದಿಯಲ್ಲಿರುವ ನಟಿ ನಯನತಾರಾ, ತ್ರಿಶಾ ಕೃಷ್ಣನ್ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಇದಲ್ಲದೆ ʼಮಹಾನಟಿʼ ಪಾತ್ರವನ್ನು ಮಾಡಿರುವ ಕೀರ್ತಿ ಸುರೇಶ್ ಕೂಡ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಮಾಡುವ ಲಿಸ್ಟ್ ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. ಸುಬ್ಬುಲಕ್ಷ್ಮಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದನ್ನು ಚಿತ್ರತಂಡ ನಿರ್ಧರಿಸಲಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಯೋಜಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಆದರೆ ಪ್ರೂಡಕ್ಷನ್ ಸಂಸ್ಥೆ ಇನ್ನಷ್ಟೇ ಅಧಿಕೃತವಾಗಿ ಚಿತ್ರದ ಬಗ್ಗೆ ಮಾಹಿತಿ ನೀಡಿಬೇಕಿದೆ.
ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ ಅವರು ಎಂ.ಎಸ್.ಸುಬ್ಬುಲಕ್ಷ್ಮಿ ಎಂದೇ ಖ್ಯಾತಿ ಆದವರು. ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ನಟಿಯೂ ಆಗಿಯೂ ಗುರುತಿಸಿಕೊಂಡಿದ್ದ ಅವರು 10ನೇ ವಯಸ್ಸಿನಲ್ಲೇ ಗಾಯನಕ್ಕೆ ಕಾಲಿಟ್ಟಿದ್ದರು.
1938 ರಲ್ಲಿ ʼಸೇವಾಸದನ್ʼ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ʼಸಾವಿತ್ರಿʼ ಮತ್ತು ʼಮೀರಾʼ ಸಿನಿಮಾದಲ್ಲಿ ನಟಿಸಿದ್ದರು.
ʼಸುಪ್ರಭಾತಂʼ, ʼಕುರೈ ಒನ್ರುಮ್ ಇಲ್ಲೈʼ, ʼಭಜಗೋವಿಂದಂʼ, ʼವಿಷ್ಣು ಸಹಸ್ರನಾಮʼ, ʼಹನುಮಾನ್ ಚಾಲೀಸಾʼ, ಹಾಗೂ ಇತರೆ ಪ್ರಮುಖ ಭಕ್ತಿಗೀತೆಗಳನ್ನು ಹಾಡಿದ್ದರು.
‘ಭಾರತರತ್ನ’ವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊದಲಾಗಿ ಪಡೆದವರು ಸುಬ್ಬುಲಕ್ಷ್ಮಿ. 2004 ರಲ್ಲಿ ತನ್ನ 88ನೇ ವಯಸ್ಸಿನಲ್ಲಿ ಅವರು ನಿಧನರಾದರು.