Advertisement

ತ್ರಿಪುರಾ ಹೊಸ ಸಿಎಂ ಆಗಿ ಮಾಣಿಕ್‌ ಸಾಹಾ ಆಯ್ಕೆ : ಯಾರಿವರು ಮಾಣಿಕ್‌ ಸಾಹಾ?

09:19 PM May 14, 2022 | Team Udayavani |

ನವದೆಹಲಿ: ಗುಜರಾತ್‌, ಕರ್ನಾಟಕ ಮತ್ತು ಉತ್ತರಾಖಂಡದ ಬಳಿಕ ಬಿಜೆಪಿ ಹೈಕಮಾಂಡ್‌, ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆಯೇ ಮತ್ತೊಬ್ಬ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದೆ.

Advertisement

ಈಗ ತ್ರಿಪುರಾ ಸರದಿ. ಇಲ್ಲಿ ಸಿಎಂ ಆಗಿದ್ದ ಬಿಪ್ಲವ್‌ ಕುಮಾರ್‌ ದೇವ್‌ ಅವರನ್ನು ದಿಢೀರನೇ ಬದಲಿಸಿರುವ ಬಿಜೆಪಿ ವರಿಷ್ಠರು, ಇವರ ಸ್ಥಾನಕ್ಕೆ ಕ್ಲೀನ್‌ ಇಮೇಜ್‌ ಮತ್ತು ದಂತ ವೈದ್ಯ ಮಾಣಿಕ್‌ ಸಾಹಾ ಅವರನ್ನು ಆಯ್ಕೆ ಮಾಡಿದ್ದಾರೆ.

2023ರ ಮಾರ್ಚ್‌ಗೆ ತ್ರಿಪುರಾದಲ್ಲೂ ವಿಧಾನಸಭೆ ಚುನಾವಣೆ ಇದೆ. 2020ರಲ್ಲಿ  ತ್ರಿಪುರಾ ಬಿಜೆಪಿಯಲ್ಲಿಯೂ ಆಂತರಿಕ ಭಿನ್ನಮತ ತಲೆದೋರಿತ್ತು.  ಬಿಪ್ಲವ್‌ ವಿರುದ್ಧ ಸಿಡಿದೆದ್ದಿದ್ದ ಸುದೀಪ್‌ ರಾಯ್‌ ಬರ್ಮನ್‌ರನ್ನು ಆರೋಗ್ಯ ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಬಳಿಕ ರಾಯ್‌ ಬರ್ಮನ್‌ ಮತ್ತು ಆಶೀಶ್‌ ಕುಮಾರ್‌ ಸಾಹಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದರು. ಇದಕ್ಕೂ ಮುನ್ನ ಆಶೀಸ್‌ ದಾಸ್‌ ಕೂಡ ಮುಖ್ಯಮಂತ್ರಿ ದೇವ್‌ ಬಗ್ಗೆ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಇವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶಾಸಕ ಸ್ಥಾನದಿಂದ ಅನರ್ಹ ಮಾಡಲಾಗಿತ್ತು. ಅಲ್ಲದೆ, ಕೆಲವು ಬಿಜೆಪಿ ಹಿರಿಯ ನಾಯಕರು ದೇವ್‌ ವಿರುದ್ಧ ಅಸಮಾಧಾನಗೊಂಡಿದ್ದರಿಂದ ಅನಿವಾರ್ಯವಾಗಿ ಬದಲಿಸಲಾಗಿದೆ.

ಹಾಗೆಯೇ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಳ್ಳಬಾರದು ಎಂಬ ಕಾರಣದಿಂದ ಬಿಪ್ಲವ್‌ ಅವರನ್ನು ಬದಲಾವಣೆ ಮಾಡಿದೆ. ವಿಶೇಷವೆಂದರೆ, ಉತ್ತರಾಖಂಡದಲ್ಲಿ ಈ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದೆ.

ಇದನ್ನೂ ಓದಿ : ಚಾಮರಾಜನಗರ : ಆನ್ ಲೈನ್ ವಂಚನೆ ಪ್ರಕರಣವನ್ನು ಭೇದಿಸಿದ ಸೈಬರ್ ಠಾಣಾ ಪೊಲೀಸರು

Advertisement

ಯಾರಿವರು ಮಾಣಿಕ್‌ ಸಾಹಾ?

ಸದ್ಯ ತ್ರಿಪುರಾ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಮಾಣಿಕ್‌ ಸಾಹಾ ಅವರ ಬಗ್ಗೆ ಉತ್ತಮ ಅಭಿಪ್ರಾಯಗಳಿವೆ. ಅದರಲ್ಲೂ ಇವರ ಕ್ಲೀನ್‌ ಇಮೇಜ್‌ ಪಕ್ಷಕ್ಕೆ ಸಹಾಯಕವಾಗುವ ಸಾಧ್ಯತೆ ಇದೆ. ಹಾಗೆಯೇ ಅವರು ದಂತ ಸರ್ಜನ್‌ ಆಗಿದ್ದಾರೆ. 2016ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. 2020ರಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next