Advertisement

ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ್ದಕ್ಕೆ ವ್ಯಕ್ತಿಯ ವಿರುದ್ಧ ಕೇಸು ದಾಖಲು

11:31 PM Apr 30, 2023 | Team Udayavani |

ಗುನಾ: ಮಧ್ಯಪ್ರದೇಶದ ಗುನಾದಲ್ಲಿ ತನ್ನ ಪರಿತ್ಯಕ್ತ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

29 ವರ್ಷದ ಪತ್ನಿ ನೀಡಿರುವ ದೂರಿನ ಆಧಾರದಲ್ಲಿ ರಾಜಸ್ಥಾನದ ಬಾರಾನ್‌ ನಿವಾಸಿ ಜಾಹೀರ್‌ ಖಾನ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಪತಿಯೊಂದಿಗೆ ಪದೇ ಪದೆ ಜಗಳದ ಹಿನ್ನೆಲೆಯಲ್ಲಿ 2019ರಿಂದ ಗುನಾದಲ್ಲಿರುವ ತಮ್ಮ ಪೋಷಕರ ಮನೆಯಲ್ಲಿ ಪತ್ನಿ ವಾಸವಿದ್ದಾರೆ.

“ಸ್ಥಳೀಯ ಕೋರ್ಟ್‌ನಲ್ಲಿ ಜೀವನ ನಿರ್ವಹಣೆಗಾಗಿ ಪತಿಯ ವಿರುದ್ಧ ಪತ್ನಿ ದಾವೆ ಹೂಡಿದ್ದಾರೆ. ಶನಿವಾರ ಕೋರ್ಟ್‌ ವಿಚಾರಣೆಗಾಗಿ ಆಗಮಿಸಿದ್ದ ಜಾಹೀರ್‌ ಖಾನ್‌, ಅತ್ತೆ ಮತ್ತು ಸಂಬಂಧಿಕರ ಉಪಸ್ಥಿತಿಯಲ್ಲಿ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ್ದಾರೆ’, ಎಂದು ಪೊಲೀಸರು ತಿಳಿಸಿದ್ದಾರೆ. ತತ್‌ಕ್ಷಣ ತ್ರಿವಳಿ ತಲಾಖ್‌ ಅನುಸರಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next