Advertisement

ನ್ಯಾಯ ಸಿಗದಿದ್ದರೆ suicide: SC,ಮೋದಿಗೆ ತ್ರಿವಳಿ ತಲಾಕ್‌ ಸಂತ್ರಸ್ತೆ

12:19 PM May 19, 2017 | udayavani editorial |

ಡೆಹರಾಡೂನ್‌ : ಉತ್ತರಾಖಂಡದ ತ್ರಿವಳಿ ತಲಾಕ್‌ ಸಂತ್ರಸ್ತೆಯೋರ್ವಳು ತನಗೆ ನ್ಯಾಯಾಂಗ ವ್ಯವಸ್ಥೆಯಿಂದ ನ್ಯಾಯ ದೊರಕದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.

Advertisement

ತನ್ನ ಪತಿಯಿಂದ ತ್ರಿವಳಿ ತಲಾಕ್‌ ಪಡೆದಿರುವ ಈ ಸಂತ್ರಸ್ತೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟಿಗೆ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ; ತನಗೆ ನ್ಯಾಯ ಸಿಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾಳೆ.

ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್‌ ಜೆ ಎಸ್‌ ಖೇಹರ್‌ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ತ್ರಿವಳಿ ತಲಾಕ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳ ಮೇಲಿನ ಆರು ದಿನಗಳ ಸುದೀರ್ಘ‌ ವಿಚಾರಣೆಯನ್ನು ನಿನ್ನೆ ಗುರುವಾರ ಮುಗಿಸಿದ್ದು ಈಗಿನ್ನು ತೀರ್ಪು ಕೊಡಲಿದೆ. 

ಆರು ದಿನಗಳ ವಿಚಾರಣೆಯ ಕಾಲದಲ್ಲಿ  ಸುಪ್ರೀಂ ಕೋರ್ಟ್‌, ತ್ರಿವಳಿ ತಲಾಕ್‌ ಇಸ್ಲಾಂ ಧರ್ಮದಲ್ಲಿ ಮೂಲಭೂತವಾಗಿದೆಯೇ ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಮುಂದಿಟ್ಟಿತ್ತು. 

‘ಮುಸ್ಲಿಂ ಸಮುದಾಯದಲ್ಲಿನ ವಿವಾಹವು ಒಂದು ಒಪ್ಪಂದವಾಗಿದ್ದು  ಮಹಿಳೆಯು ತನ್ನ ಘನತೆ, ಗೌರವಗಳನ್ನು ರಕ್ಷಿಸಲು ನಿಕಾಹ್‌ನಾಮಾದಲ್ಲಿ ಕೆಲವು ಶರತುಗಳಿಗೆ ಹೆಚ್ಚಿನ ಮಹತ್ವ ಕೊಡಬಹುದು. ಆಕೆ ಕೂಡ ತನ್ನ ಪತ್ಯಿ ವಿರುದ್ಧ ತ್ರಿವಳಿ ತಲಾಕ್‌ ಘೋಷಿಸಬಹುದು ಮತ್ತು ವಿಚ್ಛೇದನ ಪ್ರಕರಣದಲ್ಲಿ ಅತ್ಯಧಿಕ ಮೆಹರ್‌ ಆಗ್ರಹಿಸಬಹುದು’ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇಂದು ಬುಧವಾರ ಸುಪ್ರೀಂ ಕೋರ್ಟಿಗೆ ಹೇಳಿತ್ತು. 

Advertisement

‘ತ್ರಿವಳಿ ತಲಾಕ್‌ ಒಂದು ಪಾಪ ಕೃತ್ಯವಾಗಿದ್ದು ಆ ಕೃತ್ಯವನ್ನು ಎಸಗುವ ವ್ಯಕ್ತಿಗೆ ಮುಸ್ಲಿಂ ಸಮುದಾಯದಿಂದ ಬಹಿಷ್ಕಾರ ಹಾಕಬೇಕು’ ಎಂದು 2017ರ ಎಪ್ರಿಲ್‌ 14ರಂದು ಕೈಗೊಳ್ಳಲಾದ ಠರಾವಿನ ಪ್ರತಿಯನ್ನು ಮಂಡಳಿಯು ಸುಪ್ರೀಂ ಕೋರ್ಟಿ ಗೆ ತೋರಿಸಿತ್ತು.

ನಿಕಾಹ್‌ನಾಮಾದ ಸಂದರ್ಭದಲ್ಲಿ ತ್ರಿವಳಿ ತಲಾಕ್‌ಗೆ ಒಲ್ಲೆನೆಂದು ಹೇಳುವ ಹಕ್ಕು ಮುಸ್ಲಿಂ ಮಹಿಳೆಗೆ ಇದೆಯೇ ಮತ್ತು ಈ ಶರತ್ತನ್ನು ನಿಕಾಹ್‌ನಾಮಾದಲ್ಲಿ ಕಾಣಿಸುವಂತೆ ಎಲ್ಲ ಕಾಝಿಗಳನ್ನು ಕೇಳಿಕೊಳ್ಳಬಹುದೇ ಎಂದು ಸುಪ್ರೀಂ ಕೋರ್ಟ್‌ ಕೇಳಿದ ಪ್ರಶ್ನೆಗೆ ಮಂಡಳಿಯು ಈ ರೀತಿಯ ಉತ್ತರ ನೀಡಿತ್ತು. ಮಂಡಳಿಯ ಪರವಾಗಿ ಮಾಜಿ ಕೇಂದ್ರ ಸಚಿವ, ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next