Advertisement

ಮೋದಿ ಪ್ರಶಂಸಿಸಿದ ಮುಸ್ಲಿಂ ಮಹಿಳೆ: ‘ಹಿಂದೂ’ಆಗಿ ಮತಾಂತರಗೊಳ್ಳುವೆ’

03:35 PM Apr 19, 2017 | udayavani editorial |

ಡೆಹರಾಡೂನ್‌ : ತ್ರಿವಳಿ ತಲಾಕ್‌ ಕುರಿತ ವಾದ – ವಿವಾದಗಳು ಮುಂದುವರಿದಿರುವ ನಡುವೆಯೇ ಮುಸ್ಲಿಂ ಮಹಿಳೆಯೊಬ್ಬಳು, ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವಳಿ ತಲಾಕ್‌ಗೆ ಬಲಿಯಾಗಿರುವ ಮುಸ್ಲಿಂ ಮಹಿಳೆಯರ ಬಾಳಲ್ಲಿ ಹೊಸ ಬೆಳಕನ್ನು ಕಾಣಿಸಲು ನಡೆಸುತ್ತಿರುವ ಪ್ರಯತ್ನವನ್ನು ಮನಸಾರೆ ಶ್ಲಾಘನೆಗೈದಿದ್ದಾಳೆ. 

Advertisement

ಮಾತ್ರವಲ್ಲದೆ ತ್ರಿವಳಿ ತಲಾಕ್‌ನ ಅನಿಷ್ಠ ಪದ್ದತಿಯಿಂದ ಅನ್ಯಾಯ, ಶೋಷಣೆಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು  ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದೇ ಲೇಸೆಂದು ಉತ್ತರಾಖಂಡದ ಆ ಮುಸ್ಲಿಂ ಮಹಿಳೆ ಹೇಳಿದ್ದಾಳೆ. 

ಹಿಂದೂ ಧರ್ಮಕ್ಕೆ ಮತಾಂತರಗೊಂಡಾಗ ಪುರುಷರು ನಮಗೆ ಮೂರು ಬಾರಿ ತಲಾಕ್‌ ಹೇಳುವ ಮೂಲಕ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಆ ಮಹಿಳೆ ತ್ರಿವಳಿ ತಲಾಕ್‌ ಪದ್ಧತಿಯ ಬಗ್ಗೆ ತನ್ನಲ್ಲಿರುವ ಅಸಮಾಧಾನ, ಅತೃಪ್ತಿ ಮತ್ತು ಜುಗುಪ್ಸೆಯನ್ನು ಹೊರಹಾಕಿದ್ದಾಳೆ. 

ತ್ರಿವಳಿ ತಲಾಕ್‌ ಪದ್ಧತಿಯ ವಿರುದ್ಧ ಸಮರ ಸಾರಿರುವ ಉತ್ತರಾಖಂಡದ ಈ ಮಹಿಳೆಯು ಸಹೋದರಿಯು ಸ್ವತಃ ತ್ರಿವಳಿ ತಲಾಕ್‌ನ ಬಲಿಪಶುವಾಗಿದ್ದಾಳೆ.

ಹಿಜಾಬ್‌ನಿಂದ ಮುಖ ಮುಚ್ಚಿಕೊಂಡಿರುವ ಉತ್ತರಾಖಂಡದ, ಹೆಸರು ಹೇಳಬಯಸದ ಈ ಮಹಿಳೆಯು ಹೇಳಿರುವುದು ಇಷ್ಟು :

Advertisement

“ಮೂರು ಬಾರಿ ತಲಾಕ್‌, ತಲಾಕ್‌, ತಲಾಕ್‌ ಎಂದು ಹೇಳುವ ಮೂಲಕ ದಾಂಪತ್ಯದಲ್ಲಿ ಪತ್ನಿಯನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಪೂರ್ವ ಸೂಚನೆ ಕೂಡ ಇಲ್ಲದೇ ವಿಚ್ಛೇಧನ ನೀಡಬಲ್ಲ ಪುರುಷನ ಜತೆಗೆ ಜೀವನವನ್ನು ಸವೆಸುವುದರಲ್ಲಿ ಅರ್ಥವಾದರೂ ಏನಿದೆ ? ಈ ಅನ್ಯಾಯ ನಮಗೆ ನಮ್ಮ ಇಳಿ ವಯಸ್ಸಿನಲ್ಲಿ ನಡೆದರೆ ನಾವು ಹೋಗುವುದಾದರೂ ಎಲ್ಲಿಗೆ ? ಇವತ್ತು ನಾನು ಸಣ್ಣ ವಯಸ್ಸಿನವಳಿದ್ದೇನೆ – ಆದರೆ ಜೀವನ ಪೂರ್ತಿ ತ್ರಿವಳಿ ತಲಾಕ್‌ಗೆ ಹೆದರಿ ನಾನು ನನ್ನ ಬದುಕನ್ನು ಯಾಕೆ ಸವೆಸಬೇಕು ? ಆದರ ಬದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಪುರುಷನನ್ನು ಮದುವೆಯಾದರೆ, ಆತ ಮೂರು ಬಾರಿ ತಲಾಕ್‌ ಪದವನ್ನು ಉಚ್ಚರಿಸುವ ಮೂಲಕ ನನ್ನ ಬದುಕನ್ನು ಸರ್ವನಾಶ ಮಾಡಲಾರ. ಪ್ರಧಾನಿ ಮೋದಿ ಅವರು ದೇಶಕ್ಕಾಗಿ ಒಳಿತನ್ನೇ ಮಾಡುತ್ತಿದ್ದಾರೆ. ಅವರು ಮಹಿಳೆಯರಿಗಾಗಿ, ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗಾಗಿ ಇನ್ನೂ ಒಳ್ಳೆಯದನ್ನೇ ಮಾಡುತ್ತಿದ್ದಾರೆ’.

ಉತ್ತರಾಖಂಡದ ಈ ದಿಟ್ಟ ಮುಸ್ಲಿಂ ಮಹಿಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಕೂಡ ಹೊಗಳಿದ್ದಾಳೆ.  

Advertisement

Udayavani is now on Telegram. Click here to join our channel and stay updated with the latest news.

Next