Advertisement

ಪುಣೆಗೆ ಗೆಲುವು ತಂದ ತ್ರಿಪಾಠಿ: ಕೋಲ್ಕತಾ 4 ವಿಕೆಟ್‌ ಸೋಲು

03:16 PM May 04, 2017 | Team Udayavani |

ಕೋಲ್ಕತಾ: ರಾಹುಲ್‌ ತ್ರಿಪಾಠಿ ಅವರ ಭರ್ಜರಿ ಆಟದಿಂದಾಗಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ  ಆತಿಥೇಯ ಕೋಲ್ಕತಾ ನೈಟ್‌ರೈಡರ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. 

Advertisement

ಬ್ಯಾಟಿಂಗ್‌ ಕುಸಿತಕ್ಕೆ ಒಳಗಾದ ಕೆಕೆಆರ್‌ ತಂಡವು 8 ವಿಕೆಟಿಗೆ 155 ರನ್‌ ಗಳಿಸಿದ್ದರೆ ಪುಣೆ ತಂಡವು ತ್ರಿಪಾಠಿ ಅವರ 93 ರನ್‌ ನೆರವಿನಿಂದ 19.2 ಓವರ್‌ಗಳಲ್ಲಿ 6 ವಿಕೆಟಿಗೆ 158 ರನ್‌ ಪೇರಿಸಿ ಜಯಭೇರಿ ಬಾರಿಸಿತು.

ರಾಹುಲ್‌ ತ್ರಿಪಾಠಿ ಅವರ ಏಕಾಂಗಿ ಹೋರಾಟ ದಿಂದ ಪುಣೆ ಗೆಲುವು ಕಾಣುವಂತಾಯಿತು. ಒಂದು ಕಡೆಯಿಂದ ವಿಕೆಟ್‌ ಉರುಳುತ್ತಿದ್ದರೂ ಛಲದಿಂದ ಆಡಿದ ತ್ರಿಪಾಠಿ ಆರನೆಯವರಾಗಿ ಔಟಾಗುವ ಮೊದಲು 52 ಎಸೆತ ಎದುರಿಸಿ 93 ರನ್‌ ಗಳಿಸಿದ್ದರು. ಆಗ ತಂಡ ಗೆಲ್ಲಲು 6 ರನ್‌ ಬೇಕಿತ್ತು. 9 ಬೌಂಡರಿ ಬಾರಿಸಿದ್ದ ತ್ರಿಪಾಠಿ 7 ಆಕರ್ಷಕ ಸಿಕ್ಸರ್‌ ಬಾರಿಸಿದ್ದರು.

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್‌ ತಂಡವು ಇನ್ನೂ ರನ್‌ ಖಾತೆ ತೆರೆಯುವ ಮೊದಲೇ ಸುನೀಲ್‌ ನಾರಾಯಣ್‌ ಅವರನ್ನು ಕಳೆದುಕೊಂಡಿತು. ಜೈದೇವ್‌ ಉನಾದ್ಕತ್‌ ಎಸೆದ ಮೊದಲ ಓವರ್‌ ಪೂರ್ತಿ ಆಡಿದ ಸುನೀಲ್‌ ನಾರಾಯಣ್‌ ಅಂತಿಮ ಎಸೆತದಲ್ಲಿ ರಿಟರ್ನ್ ಕ್ಯಾಚಿತ್ತು ನಿರ್ಗಮಿಸಿದರು. ಶೆಲ್ಡನ್‌ ಜಾಕ್ಸನ್‌ ಹಿಟ್‌ ವಿಕೆಟ್‌ ಆದರೆ ಗಂಭೀರ್‌ 24 ರನ್ನಿಗೆ ಆಟ ಮುಗಿಸಿದರು. ಯೂಸುಫ್ ಪಠಾಣ್‌ 4 ರನ್‌ ತೆಗೆಯಲು 9 ಎಸೆತ ತೆಗೆದುಕೊಂಡರು. ಹೀಗಾಗಿ 55 ರನ್‌ ತಲುಪುವಷ್ಟರಲ್ಲಿ ತಂಡ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆಗಲೇ 9 ಓವರ್‌ ಮುಗಿದಿತ್ತು. 

ಮನೀಷ್‌ ಪಾಂಡೆ ಮತ್ತು ಗ್ರ್ಯಾಂಡ್‌ಹೋಮ್‌ ಆರನೇ ವಿಕೆಟಿಗೆ 48 ರನ್‌ ಪೇರಿಸಿದ್ದರಿಂದ ಕೆಕೆಆರ್‌ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಪಾಂಡೆ 37 ಮತ್ತು ಗ್ರ್ಯಾಂಡ್‌ಹೋಮ್‌ 36 ರನ್‌ ಹೊಡೆದರು. ಕೊನೆ ಹಂತದಲ್ಲಿ ಸೂರ್ಯಕುಮಾರ್‌ ಯಾದವ್‌ ಸಿಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ಯಾದವ್‌ 16 ಎಸೆತಗಳಿಂದ 30 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್

ಸುನೀಲ್‌ ನಾರಾಯಣ್‌    ಸಿ ಮತ್ತು ಬಿ ಉನಾದ್ಕತ್‌    0
ಗೌತಮ್‌ ಗಂಭೀರ್‌    ಸಿ ರಹಾನೆ ಬಿ ಸುಂದರ್‌    24
ಶೆಲ್ಡನ್‌ ಜಾಕ್ಸನ್‌    ಹಿಟ್‌ ವಿಕೆಟ್‌ ಬಿ ಸುಂದರ್‌    10
ಮನೀಷ್‌ ಪಾಂಡೆ    ಸಿ ರಹಾನೆ ಬಿ ಕ್ರಿಸ್ಟಿಯನ್‌    37
ಯೂಸುಫ್ ಪಠಾಣ್‌    ಎಲ್‌ಬಿಡಬ್ಲ್ಯು ಬಿ ತಾಹಿರ್‌    4
ಗ್ರ್ಯಾಂಡ್‌ಹೋಮ್‌    ಸಿ ಸುಂದರ್‌ ಬಿ ಉನಾದ್ಕತ್‌    36
ಸೂರ್ಯ ಕೆ. ಯಾದವ್‌    ಔಟಾಗದೆ    30
ಕ್ರಿಸ್‌ ವೋಕ್ಸ್‌    ರನೌಟ್‌    1
ನಥನ್‌ ಕೌಲ್ಟರ್‌ ನೈಲ್‌    ಸಿ ಸುಂದರ್‌ ಬಿ ಸ್ಟೋಕ್ಸ್‌    6
ಉಮೇಶ್‌ ಯಾದವ್‌    ಔಟಾಗದೆ    2    ಇತರ:        5
ಒಟ್ಟು  (20 ಓವರ್‌ಗಳಲ್ಲಿ 8 ವಿಕೆಟಿಗೆ)    155
ವಿಕೆಟ್‌ ಪತನ: 1-0, 2-19, 3-40, 4-55. 5-103, 6-119, 7-129, 8-152
ಬೌಲಿಂಗ್‌: ಜೈದೇವ್‌ ಉನಾದ್ಕತ್‌    4-1-28-2
ಬೆನ್‌ ಸ್ಟೋಕ್ಸ್‌        4-0-24-1
ವಾಷಿಂಗ್ಟನ್‌ ಸುಂದರ್‌        2-0-18-2
ಶಾದೂìಲ್‌ ಠಾಕುರ್‌        3-0-21-0
ಇಮ್ರಾನ್‌ ತಾಹಿರ್‌        4-0-36-1
ಡೇನಿಯಲ್‌ ಕ್ರಿಸ್ಟಿಯನ್‌        3-0-23-1

ರೈಸಿಂಗ್‌ ಪುಣೆ ಸೂಪರ್‌ಜೈಂಟ್‌
ಅಜಿಂಕ್ಯ ರಹಾನೆ    ಸಿ ಜಾಕ್ಸನ್‌ ಬಿ ಉಮೇಶ್‌    11
ರಾಹುಲ್‌ ತ್ರಿಪಾಠಿ     ಸಿ ಬದಲಿಗ ಬಿ ವೋಕ್ಸ್‌    93
ಸ್ಟೀವನ್‌ ಸ್ಮಿತ್‌    ಬಿ ವೋಕ್ಸ್‌    9
ಮನೋಜ್‌ ತಿವಾರಿ    ಬಿ ವೋಕ್ಸ್‌    8
ಬೆನ್‌ ಸ್ಟೋಕ್ಸ್‌    ಸಿ ಮತ್ತು ಬಿ ನಾರಾಯಣ್‌    14
ಎಂಎಸ್‌ ಧೋನಿ    ಸಿ ಜಾಕ್ಸನ್‌ ಬಿ ಕುಲದೀಪ್‌    5
ಡಿ. ಕ್ರಿಸ್ಟಿಯನ್‌    ಔಟಾಗದೆ    9
ವಾಷಿಂಗ್ಟನ್‌ ಸುಂದರ್‌    ಔಟಾಗದೆ    1
ಇತರ:        8
ಒಟ್ಟು (19.2 ಓವರ್‌ಗಳಲ್ಲಿ 6 ವಿಕೆಟಿಗೆ)    158
ವಿಕೆಟ್‌ ಪತನ: 1-11, 2-59, 3-88, 4-131, 5-139, 6-150
ಬೌಲಿಂಗ್‌: ನಥನ್‌ ಕೌಲ್ಟರ್‌ ನೈಲ್‌     3-0-41-0
ಉಮೇಶ್‌ ಯಾದವ್‌        4-0-23-1
ಕ್ರಿಸ್‌ ವೋಕ್ಸ್‌        4-0-18-3
ಸುನೀಲ್‌ ನಾರಾಯಣ್‌        4-0-28-1
ಕುಲದೀಪ್‌ ಯಾದವ್‌        4-0-35-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    0.2-0-7-0

ಪಂದ್ಯಶ್ರೇಷ್ಠ: ರಾಹುಲ್‌ ತ್ರಿಪಾಠಿ

Advertisement

Udayavani is now on Telegram. Click here to join our channel and stay updated with the latest news.

Next