ನವದೆಹಲಿ: ಏಪ್ರಿಲ್-ಮೇ ತಿಂಗಳಿನಲ್ಲಿ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸರಣಿ ನಾಟಕೀಯ ಬೆಳವಣಿಗೆಯಲ್ಲಿ ಟಿಎಂಸಿ ಪಕ್ಷವನ್ನು ತೊರೆದಿರುವ ನಡುವೆಯೇ ಶುಕ್ರವಾರ(ಫೆ.12, 2021) ತೃಣಮೂಲ ಕಾಂಗ್ರೆಸ್ ಮುಖಂಡ ದಿನೇಶ್ ತ್ರಿವೇದಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ರೋಣ ನಿರೀಕ್ಷೆಯಲ್ಲಿ ನೀತಾ ಅಶೋಕ್ : ಮೊದಲ ಚಿತ್ರದಲ್ಲೇ ಗ್ರ್ಯಾಂಡ್ ಎಂಟ್ರಿ
ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಗಾಬರಿ ಹುಟ್ಟಿಸುತ್ತಿದೆ. ಇದರು ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ಇಲ್ಲಿ ಕುಳಿತುಕೊಳ್ಳುವುದು ನಿಜಕ್ಕೂ ಅಚ್ಚರಿಯ ಭಾವನೆ ಮೂಡಿಸುತ್ತಿದೆ. ಇದೀಗ ನಾನೇನು ಮಾಡಲಿ ಎಂದು ಯೋಚಿಸುತ್ತಿದ್ದೇನೆ. ನಾನು ನನ್ನ ಪಕ್ಷದ ಸೂಚನೆ ಪಾಲಿಸಲೇ? ನಿಜಕ್ಕೂ ಅನುಸರಿಸಬೇಕು, ನನ್ನ ಆತ್ಮ ಹೇಳುತ್ತದೆ ನಾನಿಲ್ಲಿ ಕುಳಿತು ಹೇಳಲು ಏನು ಇಲ್ಲ. ಈ ನಿಟ್ಟಿನಲ್ಲಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ತ್ರಿವೇದಿ ಹೇಳಿದರು.
ನಮ್ಮ ತಾಯ್ನೆಲಕ್ಕಾಗಿ ಮಾತ್ರ ಇಲ್ಲಿಗೆ ಬಂದಿದ್ದೇವೆ. ನನ್ನನ್ನು ಈ ಸದನಕ್ಕೆ ಕಳುಹಿಸಿರುವ ನನ್ನ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ತ್ರಿವೇದಿ, ನಾನು ಪಶ್ಚಿಮಬಂಗಾಳಕ್ಕೆ ತೆರಳಿ, ರಾಜ್ಯಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದ್ದಾರೆ.
ತ್ರಿವೇದಿ ರಾಜೀನಾಮೆ ಟಿಎಂಸಿಗೆ ಅಚ್ಚರಿ ಹುಟ್ಟಿಸಿದೆ. ಆದರೆ ಮೂಲಗ ಪ್ರಕಾರ, ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಹೊಗಳಿ ತ್ರಿವೇದಿ ಟ್ವೀಟ್ ಮಾಡಿರುವುದಾಗಿ ತಿಳಿಸಿದ್ದು, ಇವರು ಕೂಡಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ನಂಬಲಾಗಿದೆ.