Advertisement

ಮಾಜಿ ಕೇಂದ್ರ ಸಚಿವ, ಟಿಎಂಸಿ ಸಂಸದ ಸುಲ್ತಾನ್‌ ಅಹ್ಮದ್‌ ವಿಧಿವಶ

06:38 PM Sep 04, 2017 | udayavani editorial |

ಹೊಸದಿಲ್ಲಿ : ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ತೃಣಮೂಲ ಕಾಂಗ್ರೆಸ್‌ ಲೋಕಸಭಾ ಸದಸ್ಯ ಸುಲ್ತಾನ್‌ ಅಹ್ಮದ್‌ (64) ಅವರಿಂದು ಬೆಳಗ್ಗೆ 11.30ರ ಹೊತ್ತಿಗೆ ತಮ್ಮ ಮನೆಯಲ್ಲಿ  ಹೃದಯಾಘಾತದಿಂದ ನಿಧನ ಹೊಂದಿದರು.

Advertisement

ಅಹ್ಮದ್‌ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್‌ನ ಸಂಸದೀಯ ಪಕ್ಷದ ಉಪ ನಾಯಕರಾಗಿದ್ದರು. 2009ರಿಂದ ಅವರು ಮೊಹಮ್ಮಡನ್‌ ನ್ಪೋರ್ಟಿಂಗ್‌ ಫ‌ುಟ್ಬಾಲ್‌ ಕ್ಲಬ್‌ನ ಅಧ್ಯಕ್ಷರಾಗಿದ್ದರು. 

ಸುಲ್ತಾನ್‌ ಅಹ್ಮದ್‌ ಅವರ ನಿಧನಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿಯಾಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next