ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ತ್ರ್ಯಂಬಕೇಶ್ವರ ದೇಗುಲದಲ್ಲಿ ಗಣ್ಯಾತಿಗಣ್ಯರ ಪಟ್ಟಿಯಲ್ಲಿ ದರ್ಶನ ಪಡೆಯಲು 200 ರೂ. ಶುಲ್ಕವನ್ನು ವಿಧಿಸಲಾಗಿದೆ! ಹೀಗೊಂದು ದರ ವಿಧಿಸಿರುವುದು ಅನಧಿಕೃತ ತ್ರ್ಯಂಬಕೇಶ್ವರ ದೇವಸ್ಥಾನ ಟ್ರಸ್ಟ್!
ಇದನ್ನು ವಿರೋಧಿಸಿ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ.
200 ರೂ. ವಿಧಿಸಿದ್ದನ್ನು ಪಿಐಎಲ್ ಮೂಲಕ ಲಲಿತಾ ಶಿಂದೆ ಎನ್ನುವವರು ವಿರೋಧಿಸಿದ ಹಿನ್ನೆಲೆಯಲ್ಲಿ ಮೇಲಿನ ಬೆಳವಣಿಗೆ ನಡೆದಿದೆ.
ವಸ್ತುಸ್ಥಿತಿಯಲ್ಲಿ ತ್ರ್ಯಂಬಕೇಶ್ವರ ದೇವಸ್ಥಾನದ ಹೆಸರಿನಲ್ಲಿ ಯಾವುದೇ ಅಧಿಕೃತತೆ ಇಲ್ಲದೇ ಎರಡು ಟ್ರಸ್ಟ್‌ಗಳು ಆರಂಭವಾಗಿವೆ. ಇದನ್ನು ಎಎಸ್‌ಐ 2014ರಲ್ಲೇ ವಿರೋಧಿಸಿತ್ತು. ಅದಕ್ಕೆ ಟ್ರಸ್ಟ್ ಕಿಂಚಿತ್ತೂ ಮರ್ಯಾದೆ ನೀಡಿಲ್ಲ ಎನ್ನಲಾಗಿದೆ.