Advertisement

Opposition unity ಇಂಡಿಯಾ ಒಕ್ಕೂಟಕ್ಕೆ ತ್ರಿವರ್ಣ ಧ್ವಜ?

12:02 AM Aug 29, 2023 | Team Udayavani |

ಹೊಸದಿಲ್ಲಿ: ಬಿಜೆಪಿಯೇತರ ವಿಪಕ್ಷಗಳ ಒಕ್ಕೂಟವಾಗಿರುವ ಇಂಡಿಯನ್‌ ನ್ಯಾಶ್‌ನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌ (INDIA) ತಮ್ಮ ಒಕ್ಕೂಟದ ಅಧಿಕೃತ ಧ್ವಜವನ್ನಾಗಿ ಅಶೋಕಚಕ್ರ ರಹಿತ ತ್ರಿವರ್ಣ ಧ್ವಜವನ್ನು ಹೊಂದಲು ಚಿಂತನೆ ನಡೆಸಿದ್ದು, ಈ ಬಗ್ಗೆ ಆ.31ರಂದು ಮುಂಬಯಿಯಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಿವೆ ಎಂದು ಮೂಲಗಳು ತಿಳಿಸಿವೆ.

Advertisement

ವಿಪಕ್ಷಗಳ ಒಕ್ಕೂಟದ ಮೊದಲ ಸಭೆಯನ್ನು ಪಾಟ್ನಾದಲ್ಲಿ ಹಾಗೂ ಎರಡನೇ ಸಭೆಯನ್ನು ಬೆಂಗಳೂರಿನಲ್ಲಿ ನಡೆಸ ಲಾಗಿತ್ತು. ಈಗ ಮೂರನೇ ಸಭೆಯನ್ನು ಮಹಾ ರಾಷ್ಟ್ರದ ಮುಂಬಯಿಯಲ್ಲಿ ನಡೆಸಲು ಯೋಜಿಸ ಲಾಗಿದೆ. ಈ ಸಭೆಯಲ್ಲಿ ದೇಶಾದ್ಯಂತ ಇನ್ನು ಮುಂ ದೆ ಒಕ್ಕೂಟ ನಡೆಸುವ ಎಲ್ಲ ರ್ಯಾಲಿಗಳಲ್ಲಿ ಮತ್ತು ಸಭೆಗಳಲ್ಲಿ ಒಕ್ಕೂಟದ ಪರವಾಗಿ ಒಂದೇ ಧ್ವಜ ಪ್ರದರ್ಶಿಸಲು ಮಾತುಕತೆ ನಡೆಸಲಾಗುತ್ತದೆ.

ಆ ಧ್ವಜ ಬಹುತೇಕ ಅಶೋಕ ಚಕ್ರವಿಲ್ಲದ ತ್ರಿವರ್ಣವೇ ಆಗಿರುವ ನಿರೀಕ್ಷೆಯೂ ಇದೆ. ಇನ್ನು ಸೆಪ್ಟೆಂಬರ್‌ನಿಂದ ವಿಪಕ್ಷಗಳ ಒಕ್ಕೂಟದ ರ‍್ಯಾಲಿ ಮತ್ತು ಸಭೆಗಳು ಆರಂಭವಾಗಲಿದ್ದು, ಬಿಜೆಪಿಯೇತರ ರಾಜ್ಯಗಳ 6 ರಿಂದ 7 ಮಂದಿ ಮುಖ್ಯಮಂತ್ರಿಗಳು ರ‍್ಯಾಲಿ ಮುನ್ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next