Advertisement

Bengaluru: 8ರ ಬಾಲಕಿಯ ಹೊಟ್ಟೆಯಲ್ಲಿದ್ದ ಕೂದಲಿನ ಉಂಡೆ ತೆಗೆದ ವೈದ್ಯರು!

11:43 AM Sep 05, 2024 | Team Udayavani |

ಬೆಂಗಳೂರು: ಟ್ರೈಕೊಫೇಜಿಯಾ ಸಿಂಡ್ರೋಮ್‌ ಸಮಸ್ಯೆಯಿಂದ ಬಳಲುತ್ತಿದ್ದ 8 ವರ್ಷದ ಬಾಲಕಿಯ ಹೊಟ್ಟೆಯಿಂದ ಬೃಹತ್‌ ಕೂದಲಿನ ಉಂಡೆಯನ್ನು ವೈಟ್‌ ಫೀಲ್ಡ್‌ನ ಆಸ್ಪರ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

Advertisement

ಟ್ರೈಕೊಫೇಜಿಯಾ ಸಿಂಡ್ರೋಮ್‌ ಸಮಸ್ಯೆಯಿಂದ ಬಳಲುವವರು ಸಾಮಾನ್ಯವಾಗಿ ತನ್ನ ಕೂದಲು ಅಥವಾ ನೆಲದಲ್ಲಿ ಬಿದ್ದಿರುವ ತಲೆ ಕೂದಲು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಅಂತೆಯೇ ಬೆಂಗಳೂರು ಮೂಲದ 8 ವರ್ಷದ ಬಾಲಕಿ ನಿರಂತರ ಎರಡು ವರ್ಷದಿಂದ ತಲೆ ಕೂದಲು ಸೇವಿಸುತ್ತಿದ್ದಳು. ಇದರಿಂದಾಗಿ ಆಕೆ ಆಹಾರ ಸೇವಿಸಲು ಹಿಂಜರಿಯುತ್ತಿದ್ದು, ನಿರಂತರವಾಗಿ ವಾಂತಿ ಸೇರಿದಂತೆ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಳು.

ಇತ್ತೀಚಿಗೆ ಚಿಕಿತ್ಸೆಗಾಗಿ ಪರೀಕ್ಷೆಗಾಗಿ ವೈಟ್‌ ಫೀಲ್ಡ್‌ ಆಸ್ಪರ್‌ ಆಸ್ಪತ್ರೆ ದಾಖಲಿಸುತ್ತಿದ್ದಂತೆ ಬಾಲಕಿಯು ಟ್ರೈಕೊಫೇಜಿಯಾ ಸಿಂಡ್ರೋಮ್‌ನಿಂದ ಬಳಲುತ್ತಿರು ವುದು ದೃಢವಾಗಿದೆ. ಆಕೆ ಸತತ ಎರಡು ವರ್ಷಗಳಿಂದ ಸೇವಿಸಿದ್ದ ಕೂದಲು ಜಠರದಲ್ಲಿ ಅಂಟಿನ ಕೂದಲಿನ ಉಂಡೆಯಾಗಿ ಪರಿವರ್ತನೆ ಗೊಂಡಿದೆ. ಇದರಿಂದ ಆಕೆ ಆಹಾರ ಸೇವಿಸುವ ಪ್ರಮಾಣ ಕಡಿಮೆಯಾಗಿ, ಅನಾರೋಗ್ಯ ಸಮಸ್ಯೆ ಯಿಂದ ಬಳಲುತ್ತಿರುವುದು ವೈದ್ಯರು ಖಚಿತ ಪಡಿಸಿದರು. ಕೂದಲಿನ ಉಂಡೆ ಜಿಗುಟ್ಟಾಗಿದ್ದ ಕಾರಣದಿಂದ ಎಂಡೋಸ್ಕೋಪಿಕ್‌ನಿಂದ ಬದಲಾಗಿ ಬಾಲಕಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಸತತ ಎರಡೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಕೂದಲಿನ ಉಂಡೆ ಹೊರ ತೆಗೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next