Advertisement

Mohan Majhi; ಒಡಿಶಾಗೆ ಬುಡಕಟ್ಟು ಸಿಎಂ: ಇಂದು ಪ್ರಮಾಣ; ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿ

10:22 PM Jun 11, 2024 | Team Udayavani |

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಹುದಿನದ ಕುತೂಹಲಕ್ಕೆ ತೆರೆಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ಮೋಹನ್‌ ಚರಣ್‌ ಮಾಝೀ ಆಯ್ಕೆಯಾಗಿದ್ದಾರೆ. ಜೂ. 12ರಂದು ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

Advertisement

ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಭೂಪೇಂದ್ರ ಯಾದವ್‌ ಕೇಂದ್ರದ ವೀಕ್ಷಕರಾಗಿ ಭಾಗವಹಿಸಿದ್ದರು. ಹಿರಿಯ ನಾಯಕರು, ಶಾಸಕರೊಂದಿಗೆ ಚರ್ಚಿಸಿದ ಬಳಿಕ ಸಿಎಂ ಸ್ಥಾನಕ್ಕೆ ಮಾಝೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಜೂ. 12ರಂದು ಮಾಝೀ ಪದಗ್ರಹಣಕ್ಕೂ ಮುನ್ನ, ಪುರಿಯ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಜತೆಗೆ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಒಡಿಶಾದಲ್ಲಿ ಬಿಜೆಪಿಯ ಮೊದಲ ಸಿಎಂ ಆಗಲಿರುವ ಮೋಹನ್‌ ಮಾಝೀ ಅವರು ಕಿಯೊಂಜರ್‌ ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಪಾರ ರಾಜಕೀಯ ಅನುಭವ, ಜನಸೇವೆ, ಸಂಘಟನಾ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ.

ಒಡಿಶಾಗೆ ಇಬ್ಬರು ಡಿಸಿಎಂಗಳು

Advertisement

ಕನಕ ವರ್ಧನ್‌ ಸಿಂಗ್‌ ದೇವ್‌ ಹಾಗೂ ಪಾರ್ವತಿ ಪರೀದಾ ಒಡಿಶಾದ ನೂತನ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಬಲಂಗೀರ್‌ ರಾಜಮನೆತನಕ್ಕೆ ಸೇರಿದ ಸಿಂಗ್‌ ದೇವ್‌ ಅವರು ಪಟ್ನಾಗಢ್‌ ಕ್ಷೇತ್ರದ ಶಾಸಕರಾಗಿದ್ದು, ಈ ಮೊದಲು ಬಿಜೆಡಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವೃತ್ತಿಯಿಂದ ಹೈಕೋರ್ಟ್‌ ವಕೀಲರಾದ ಪಾರ್ವತಿ ಪರೀದಾ ಮೊದಲ ಬಾರಿ ಶಾಸಕರಾಗಿದ್ದು, ಅವರು ನಿಮಾಪರ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವವನ್ನೂ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next