Advertisement

ಟ್ರೆಂಟ್‌ ಬೌಲ್ಟ್ ಫಿಟ್‌; ಟೆಸ್ಟ್‌ ತಂಡಕ್ಕೆ ವಾಪಸ್‌

11:13 AM Feb 19, 2020 | sudhir |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡಿನ ಪ್ರಧಾನ ವೇಗಿ ಟ್ರೆಂಟ್‌ ಬೌಲ್ಟ್ ಪೂರ್ತಿ ಫಿಟ್‌ ಆಗುವ ಮೂಲಕ ಟೆಸ್ಟ್‌ ತಂಡಕ್ಕೆ ವಾಪಸಾಗಿದ್ದಾರೆ. ಪ್ರವಾಸಿ ಭಾರತದೆದುರಿನ ಮೊದಲ ಟೆಸ್ಟ್‌ ಪಂದ್ಯದ ಮೂಲಕ ಬೌಲ್ಟ್ ಅವರ ರೀ ಎಂಟ್ರಿ ಆಗಲಿದೆ.

Advertisement

ಸೋಮವಾರ ಕಿವೀಸ್‌ ತನ್ನ ಟೆಸ್ಟ್‌ ತಂಡವನ್ನು ಅಂತಿಮಗೊಳಿಸಿತು.
ಭಾರತದೆದುರಿನ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ 6 ಅಡಿ, 8 ಇಂಚು ಎತ್ತರದ ವೇಗಿ ಕೈಲ್‌ ಜಾಮೀಸನ್‌ ಅವರನ್ನು ಟೆಸ್ಟ್‌ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಮುಂಬಯಿ ಮೂಲದ ಅಜಾಜ್‌ ಪಟೇಲ್‌ 13 ಸದಸ್ಯರ ತಂಡದಲ್ಲಿರುವ ಏಕೈಕ ಸ್ಪಿನ್ನರ್‌.

ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ವೇಳೆ ಬಲಗೈ ಮೂಳೆ ಮುರಿತದಿಂದಾಗಿ ಟ್ರೆಂಟ್‌ ಬೌಲ್ಟ್ ಭಾರತದೆದುರಿನ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದರು.

“ಟೆಸ್ಟ್‌ ಸರಣಿಗೆ ಬೌಲ್ಟ್ ಲಭ್ಯವಾಗುತ್ತಿರುವುದು ಖುಷಿಯ ಸಮಾಚಾರ. ಇದರಿಂದ ತಂಡಕ್ಕೆ ಶಕ್ತಿ ಮತ್ತು ಅನುಭವವೆರಡೂ ಲಭಿಸಲಿದೆ’ ಎಂಬುದಾಗಿ ಆಯ್ಕೆ ಮಂಡಳಿ ಅಧ್ಯಕ್ಷ ಗ್ಯಾರಿ ಸ್ಟೀಡ್‌ ಹೇಳಿದ್ದಾರೆ.

ಕೈಲ್‌ ಜಾಮೀಸನ್‌ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಕಳೆದ ಆಸ್ಟ್ರೇಲಿಯ ವಿರುದ್ಧದ ಸರಣಿ ವೇಳೆ ಲಾಕೀ ಫ‌ರ್ಗ್ಯುಸನ್‌ ಗಾಯಾಳಾದ ಕಾರಣ ಜಾಮೀಸನ್‌ ಕರೆ ಪಡೆದಿದ್ದರು. ಆದರೆ ಟೆಸ್ಟ್‌ ಆಡುವ ಅವಕಾಶ ಲಭಿಸಿರಲಿಲ್ಲ, ಭಾರತದೆದುರು ಟೆಸ್ಟ್‌ ಕ್ಯಾಪ್‌ ಧರಿಸುವುದರಲ್ಲಿ ಅನುಮಾನವಿಲ್ಲ. ವೆಲ್ಲಿಂಗ್ಟನ್‌ನ ಬೌನ್ಸಿ ಟ್ರ್ಯಾಕ್‌ ಮೇಲೆ ಜಾಮೀಸನ್‌ ಜಾದೂ ಮಾಡಲಿದ್ದಾರೆಂಬುದು ಗ್ಯಾರಿ ಸ್ಟೀಡ್‌ ನಂಬಿಕೆ.

Advertisement

ಮುಂಬಯಿ ಮೂಲದ ಸ್ಪಿನ್ನರ್‌
ಲೆಗ್‌ ಸ್ಪಿನ್ನರ್‌ ಐಶ್‌ ಸೋಧಿ ಅವರನ್ನು ಮೀರಿಸಿ ಆಯ್ಕೆಯಾಗಿರುವ ಅಜಾಜ್‌ ಪಟೇಲ್‌ ಮೂಲತಃ ಮುಂಬಯಿಯವರು. ನ್ಯೂಜಿಲ್ಯಾಂಡಿನ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿರುವುದು ಪಟೇಲ್‌ ಹೆಗ್ಗಳಿಕೆ.

ಬ್ಯಾಟಿಂಗ್‌ ಆಲ್‌ರೌಂಡರ್‌ ಡ್ಯಾರಿಲ್‌ ಮಿಚೆಲ್‌ ಕೂಡ ತಂಡದಲ್ಲಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ಆಡಲಾದ ಇಂಗ್ಲೆಂಡ್‌ ವಿರುದ್ಧದ ಪದಾರ್ಪಣ ಟೆಸ್ಟ್‌ ಪಂದ್ಯದಲ್ಲೇ ಮಿಚೆಲ್‌ ತಮ್ಮ ಬ್ಯಾಟಿಂಗ್‌ ಪವರ್‌ ತೋರಿದ್ದರು.

ನ್ಯೂಜಿಲ್ಯಾಂಡ್‌ ತಂಡ
ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಿಂಡೆಲ್‌, ಟ್ರೆಂಟ್‌ ಬೌಲ್ಟ್, ಗ್ರ್ಯಾಂಡ್‌ಹೋಮ್‌, ಕೈಲ್‌ ಜಾಮೀಸನ್‌, ಟಾಮ್‌ ಲ್ಯಾಥಂ, ಡ್ಯಾರಿಲ್‌ ಮಿಚೆಲ್‌, ಹೆನ್ರಿ ನಿಕೋಲ್ಸ್‌, ಅಜಾಜ್‌ ಪಟೇಲ್‌, ಟಿಮ್‌ ಸೌಥಿ, ರಾಸ್‌ ಟೇಲರ್‌, ನೀಲ್‌ ವ್ಯಾಗ್ನರ್‌, ಬ್ರಾಡ್ಲಿ ವಾಟಿÉಂಗ್‌.

Advertisement

Udayavani is now on Telegram. Click here to join our channel and stay updated with the latest news.

Next