ಫ್ಯಾಶನ್ ಜಗತ್ತು ವಿಸ್ತಾರವಾಗುತ್ತ ಹೋದಂತೆ, ಕಿವಿಗೆ ಬಗೆಬಗೆಯಲ್ಲಿ ಆಭರಣಗಳನ್ನು ಧರಿಸಿಯೂ ಮಿಂಚಬಹುದು ಎಂಬ ಗುಟ್ಟು ಮಹಿಳೆಗೆ ಗೊತ್ತಾಗಿ ಹೋಯಿತು. ಆಗ ಜೊತೆಯಾದದ್ದೇ ಕಿವಿಯೋಲೆ. ಕಿವಿಯ ಮೇಲಿನಿಂದ ಕೆಳಗಿನವರೆಗೂ “ಪಿನ್’ ಮಾಡಿ ಧರಿಸಬಲ್ಲಂಥ ಕಿವಿಯೋಲೆಗಳು ಬಂದಾಗ, ಅವನ್ನೆಲ್ಲ ಮಹಿಳೆಯರು ತುಂಬಾ ಖುಷಿಯಿಂದಲೇ ಸ್ವಾಗತಿಸಿದರು.
ಹಿಂದಿನ ಎಲ್ಲಾ ಫ್ಯಾಷನ್‌ಗಳು ಇದೀಗ ಒಂದೊಂದಾಗಿ ಹೊಸ ಲುಕ್‌ನೊಂದಿಗೆ ಮರುಕಳಿಸಿ ಫ್ಯಾಷನ್ ಜಗತ್ತಿನಲ್ಲಿ ಮತ್ತೆ ಹೊಸದೊಂದು ಫ್ಯಾಶನ್ ಆರಂಭಕ್ಕೆ ಮುನ್ನುಡಿ ಬರೆದಿವೆ. ಆಭರಣಗಳ ವಿಷಯಕ್ಕೆ ಬಂದರೆ ಹಿಂದಿನ ಕಾಲದಲ್ಲಿ ಇದ್ದಂತಹ ಸಾಂಸ್ಕೃತಿಕ ಶೈಲಿಯಲ್ಲಿಯೇ ಮತ್ತಷ್ಟು ಆಧುನಿಕತೆ ಬೆರೆತು ನವಿರಾದ ವಿನ್ಯಾಸಗಳಲ್ಲಿ ಮಹಿಳೆಯರ ಸೌಂದರ್ಯ ಹೆಚ್ಚಿಸಿವೆ. ಅದೇ ಕಾರಣದಿಂದ ಮಹಿಳೆಯರನ್ನು ಸೆಳೆಯುತ್ತಿವೆ. ಅಂಥ ಆಭರಣಗಳ ಸಾಲಿಗೆ ಇದೀಗ “ಇಯರ್ ಕಫ್ಸ್’ಗಳು ಸೇರಿಕೊಂಡಿವೆ.
ಒಂದು ಕಾಲವಿತ್ತು. ಆಗೆಲ್ಲಾ ಕಿವಿಗೆ ಓಲೆ, ಜುಮುಕಿ ಧರಿಸಿದರೆ ಅಷ್ಟೇ ಸಾಕು ಎಂಬ ಮಾತಿತ್ತು. ಆದರೆ ಫ್ಯಾಶನ್ ಜಗತ್ತು ವಿಸ್ತಾರವಾಗುತ್ತ ಹೋದಂತೆ, ಕಿವಿಗೆ ಬಗೆಬಗೆಯಲ್ಲಿ ಆಭರಣಗಳನ್ನು ಧರಿಸಿಯೂ ಮಿಛಬಹುದು ಎಂಬ ಗುಟ್ಟು ಮಹಿಳೆಗೆ ಗೊತ್ಥಾಗಿ ಹೋಯಿತು. ಆಗ ಜೊತೆಯಾದದ್ದೇ ಕಿವಿಯೋಲೆ. ಕಿವಿಯ ಮೇಲಿನಿಂದ ಕೆಳಗಿನವರೆಗೂ “ಪಿನ್’ ಮಾಡಿ ಧರಿಸಬಲ್ಲಂಥ ಕಿವಿಯೋಲೆಗಳು ಬಂದಾಗ, ಅವನ್ನೆಲ್ಲ ಮಹಿಳೆಯರು ತುಂಬಾ ಖುಷಿಯಿಂದಲೇ ಸ್ವಾಗತಿಸಿದರು. ಕೊಳ್ಳುವವರು ಇರುವಾಗ ಉತ್ಪಾದಿಸುವವರೂ ಇರುತ್ತಾರಲ್ಲವೆ? ಕಿವಿಯೋಲೆಗಳ ವಿಷಯದಲ್ಲೂ ಹಾಗೇ ಆಯಿತು.
ಬಂಗಾರ, ವಜ್ರ, ಪ್ಲಾಟಿನಂನ ಕಿವಿಯೋಲೆಗಳು ಮಾರುಕಟ್ಟೆಗೆ ಬಂದವು ದೇವತೆಗಳು, ರಾಣಿಯರು ಕಿವಿ ಕಾಣದ ರೀತಿಯಲ್ಲಿ ಕಿವಿಯೋಲೆಗಳನ್ನು ಹಾಕಿಕೊಳ್ಳುತ್ತಿದ್ದುದನ್ನು ನಾವೆಲ್ಲಾ ಪೌರಾಣಿಕ ಹಾಗೂ ಜಾನಪದ ಕಥೆ- ಚಿತ್ರಗಳಲ್ಲಿ ನೋಡಿದ್ದೇವೆ. ಆ ಆಭರಣಗಳಿಗೆ ಕರ್ಣಾಭರಣಗಳು ಅಥವಾ ಕಿವಿ ಪಟ್ಟಿ ಎಂಬ ಹೆಸರಿತ್ತು. ಇದೀಗ ಹೊಸ ರೀತಿಯ ಲುಕ್‌ನೊಂದಿಗೆ, ವಿಭಿನ್ನ ವಿನ್ಯಾಸ ಮತ್ತು ಆಕಾರಗಳಲ್ಲಿ ಈ ಕರ್ಣಾಭರಣಗಳು ದೊರೆಯುತ್ತಿವೆ. ಇಯರ್ ಕಪ್ಸ್ ಎಂಬ ಹೆಸರಿನಲ್ಲಿ ಫ್ಯಾಷನ್ ಪ್ರಿಯರ ಆ್ಯಕ್ಸೆರೀಸ್Õಗಳಲ್ಲಿ ಜಾಗ ಪಡೆದುಕೊಂಡಿವೆ.
ಟ್ಯಾಸೆಲ್ ಡ್ಯಾಲಿಂಗ್, ಸಿಂಪಲ್ ಅಂಡ್ ಸ್ಲಿಕ್ ಮತ್ತು ಗೋಲ್ಡ್ ಪ್ಲೇಟೆಡ್‌ನಲ್ಲಿ ಹಲವು ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿರುವ ಇಯರ್ ಕಫ್ಸ್ಗಳು àಗಿನ ಹೊಸ ಫ್ಯಾಶನ್ ಆಹಿವೆ. ಸಂಪೂರ್ಣವಾಗಿ ಕಿವಿಯನ್ನು ಅಲಂಕರಿಸುವ ಎಲೆ, ಬಳ್ಳಿ, ಪುಟ್ಟ ಪುಟ್ಟ ಹೂವಿನ ಆಕಾರ ಮತ್ತು ನಕ್ಷತ್ರ ಆಕಾರದ, ನವಿಲು, ಚಿಟ್ಟೆ, ಹಾವು ಮತ್ತು ಹಲ್ಲಿ, ಹೂ ಗುತ್ಛಗಳ ಆಕಾರದಲ್ಲಿ, ವಿವಿಧ ಚಿತ್ತಾರಗಳ ಮಾದರಿಯಲ್ಲಿ, ಈ ಚೆಲುವಿನ ಆಭರಣಗಳು ರೂಪು ತಾಳಿವೆ. ಇಷ್ಟಲ್ಲದೆ ಮಣಿಗಳಿಂದ ಕೂಡಿದ ಚೈನ್ ಮಾದರಿಯ ಇಳೆ ಬೀಳುವ ಇಯರ್ ಕಫ್ಸ್ಗಳು ಅಲ್ಲದೇ ಮುತ್ತು, ಹವಳ ಮತ್ತು ಗೋಲ್ಡ್‌ನಿಂದ ಮಾಡಿದ ಇಯರ್ ಕಫ್ಸ್ಗಳೂ ಮಾರುಕಟ್ಟೆಯಲ್ಲಿ ಲಭ್ಯ.
ಇಯರ್ ಕಫ್ಸ್ ಅಂತರಾಷ್ಟ್ರೀಯ ಫ್ಯಾಷನ್ ಜಗತ್ತಿನಲ್ಲಿ ಕೂಡ ಹೆಸರುವಾಸಿ. ದೇಶಿ-ವಿದೇಶಿ ಫ್ಯಾಷನ್ ತಾರೆಯರು ರ್‍ಯಾಂಪ್ ವಾಕ್‌ನಲ್ಲಿ ಕೇವಲ ಒಂದು ಕಿವಿಗೆ ಮಾತ್ರ ಇಯರ್ ಕಫ್ಸ್ ಧರಿಸಿ ಟ್ರೆಂಡಿ ಎನ್ನಿಸಿದ್ದಾರೆ. ಅಲ್ಲದೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ “ರಾಮಲೀಲಾ’ ಚಿತ್ರದಲ್ಲಿ ಸಾಂಸ್ಕೃತಿಕ ದಿರಿಸಿನೊಂದಿಗೆ ಇಯರ್ ಕಫ್ಸ್ ಹಾಕಿಕೊಂಡು ತನ್ನ ಚೆಲುವನ್ನು ಪ್ರದರ್ಶಿಸಿದ್ದಾಳೆ. ಅನುಷ್ಕಾ ಶರ್ಮಾ, ಶ್ರುತಿ ಹಾಸನ್ ಹಲವು ಸಿನಿತಾರೆಯರು ಟ್ರೆಂಡಿ ಇಯರ್ ಕಫ್ಸ್ ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ.
ಆಧುನಿಕ ಉಡುಗೆಗಳಾದ ಜೀನ್ಸ್-ಟೀ ಶರ್ಟ್ಸ್, ಫಾಲಾಗೋ, ಕುರ್ತಾ ಮತ್ತು ಲಾಂಗ್ ಫ್ರಾಕ್, ಮ್ಯಾಕ್ಸಿ ಡ್ರೆಸ್‌ಗಳಿಗೆ ಈ ಇಯರ್ ಕಪ್ಸ್ ಅಥವಾ ಕಿವಿಯೋಲೆಗಳು ಫರ್‌ಫೆಕ್ಟ್ ಲುಕ್ ನೀಡುತ್ತವೆ. ಇಂಡೋ-ಏಶಿಯನ್ ಮಾದರಿಯ ವಿನ್ಯಾಸಗಳಲ್ಲಿ ದೊರಕುವ ಇಯರ್ ಕಫ್ಸ್ಗಳು ಆನಾರ್ಕಲೀ ಡ್ರೆಸ್, ಸ್ಯಾರಿ, ಲೆಹಾಂಗ ಮತ್ತು ಆಫ್ ಸ್ಯಾರಿಯಂತಹ ದೇಸಿ ಉಡುಗೆಗಳಿಗೆ ಹೇಳಿಮಾಡಿಸಿದಂತಿವೆ.
ಸಮಾರಂಭಗಳಲ್ಲಿ, ಸಂಜೆ ಪಾರ್ಟಿಗಳಲ್ಲಿ ಡ್ರೆಸ್‌ಗಳಿಗೆ ಹೊಂದುವಂತಹ ಇಯರ್ ಕಫ್ಸ್ಗಳನ್ನು ಹಾಕಿಕೊಂಡರೆ ಎಲ್ಲರಿಗಿಂತ ಹೆಚ್ಚು ಮಿಂಚಬಹುದು. ವಿಶೇಷವಾಗಿ ಅಚ್ಚ ಬಿಳಿ ಮತ್ತು ಗೋಲ್ಡ್ ವರ್ಣ ವಿನ್ಯಾಸದ ಲಾಂಗ್ ಆನಾರ್ಕಲೀ ಸೂಟ್‌ಗಳಲ್ಲಿ ಮ್ಯಾಚಿಂಗ್ ಇಯರ್ ಕಫ್ಸ್ಗಳು ಏಂಜೆಲ್ ಲುಕ್ ನೀಡುವಲ್ಲಿ ಎರಡು ಮಾತಿಲ್ಲ.
– ರಶ್ಮಿ ಟಿ.