Advertisement

ಬಿಜೆಪಿ ಜಯದ ರಥಯಾತ್ರೆಗೆ ಎಚ್ಚರಿಕೆಯ ಗಂಟೆ; ಶಿವಸೇನೆ ಕಟು ಟೀಕೆ

06:10 PM Dec 11, 2018 | Sharanya Alva |

ಮುಂಬೈ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ರಾಜಸ್ಥಾನ, ಛತ್ತೀಸ್ ಗಢದಲ್ಲಿ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೈತ್ರಿಕೂಟದ ಶಿವಸೇನೆ ಕಟುವಾಗಿ ಪ್ರತಿಕ್ರಿಯೆ ನೀಡಿದೆ.

Advertisement

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯ ಜಯದ ರಥಕ್ಕೆ ಬ್ರೇಕ್ ಬಿದ್ದಂತಾಗಿದೆ ಎಂದು ಶಿವಸೇನಾ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ.

ಹಲವು ಪ್ರಮುಖ ವಿಚಾರಗಳಲ್ಲಿ ಶಿವಸೇನೆ ಭಾರತೀಯ ಜನತಾ ಪಕ್ಷ ಜೊತೆ ಅಸಮಾಧಾನ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಶಿವಸೇನೆ ಟಾಂಗ್ ಕೊಡುತ್ತಲೇ ಬಂದಿತ್ತು. 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆಯೂ ಎರಡೂ ಪಕ್ಷಗಳೂ ಪ್ರತ್ಯೇಕವಾಗಿಯೇ ಕಣಕ್ಕಿಳಿದಿದ್ದವು. ತದನಂತರ ಶಿವಸೇನೆ ಬಿಜೆಪಿ ಜೊತೆ ಕೈಜೋಡಿಸಿತ್ತು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರಬೇಕು ಎಂದು ಇತ್ತೀಚೆಗೆ ಶಿವಸೇನಾದ ವರಿಷ್ಠ ಉದ್ಧವ್ ಠಾಕ್ರೆ ಆಗ್ರಹಿಸಿದ್ದರು. ನೆರೆಯ ಪಾಕಿಸ್ತಾನದ ಭಯೋತ್ಪಾದನಾ ಕೃತ್ಯ, ರಾಮಮಂದಿರ ನಿರ್ಮಾಣ, ಆರ್ಥಿಕ ನೀತಿಗಳ ಕುರಿತು ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next