Advertisement

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಫೋಲ್ಡೇಬಲ್ ಮೊಬೈಲ್‌ಗ‌ಳದ್ದೇ ಹವಾ

10:30 AM Oct 06, 2019 | Team Udayavani |

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇದೀಗ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳು ಹೊಸ ಟ್ರೆಂಡ್‌ ಹುಟ್ಟುಹಾಕಿವೆ. ಪ್ರಮುಖ ಮೊಬೈಲ್‌ ಕಂಪೆನಿಗಳು ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ ಪರಿಚಯಿಸುವುದಾಗಿ ಹೇಳಿದ್ದು, ಗ್ರಾಹಕರ ಕುತೂಹಲ ಕೆರಳಿಸಿವೆ. ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಬರಬಹುದಾದ ಕೆಲವು ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.

Advertisement

1. ಸ್ಯಾಮ್ಸ್‌ಂಗ್‌ ಗ್ಯಾಲಕ್ಸಿ ಫೋಲ್ಡ್‌
ಸ್ಯಾಮ್ಸ್‌ಂಗ್‌ ಕಂಪನಿಯ ಬಹುನಿರೀಕ್ಷಿತ ಸ್ಯಾಮ್ಸ್‌ಂಗ್‌ ಗ್ಯಾಲಕ್ಸಿ ಫೋಲ್ಡ್‌ ಸ್ಮಾರ್ಟ್‌ಫೋನ್‌ ಶುಕ್ರವಾರ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಭಾರತದ ಮಾರುಕಟ್ಟೆಯ ದರ 1.65 ಲಕ್ಷ ಎನ್ನಲಾಗಿದೆ. ಈ ಫೋನ್‌ ಅನ್ನು ಮಡಚಿದಾಗ ಪರದೆ ಗಾತ್ರ 4.6 ಕಾಣಲಿದ್ದು, ಬಿಡಿಸಿದಾಗ 7.3 ಇಂಚಿನ ಟ್ಯಾಬ್ಲೆಟ್‌ ಗಾತ್ರಕ್ಕೆ ಹಿಗ್ಗುತ್ತದೆ. ಜತೆಗೆ ಮುಂಭಾಗದಲ್ಲಿ ಮೂರು ಸೆಲ್ಫಿà ಕ್ಯಾಮೆರಾಕ್ಕೆ ಸಪೋರ್ಟ್‌ ಮಾಡುವಂತಹ ನೋಚ್‌ ಹಾಗೂ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾಟ್‌ಫೋನ್‌ನ ಆಪ್‌ಗ್ರೇಡ್ ವರ್ಷನ್‌ 2020ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಎಂದು ಸ್ಯಾಮ್ಸ್‌ಂಗ್‌ ಕಂಪನಿ ಹೇಳಿದೆ.

2. ಮೈಕ್ರೋಸಾಫ್ಟ್
ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೈಕ್ರೋಸಾಫ್ಟ್ ಫೋನ್‌ ವಿಶಿಷ್ಟ ಫೀಚರ್ಗಳನ್ನು ಒಳಗೊಂಡಿದ್ದು, 2020ರ ಕ್ರಿಸ್‌ಮಸ್‌ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಡ್ಯುಯಲ್‌ ಸ್ಕ್ರೀನ್‌ ಈ ಸ್ಮಾರ್ಟ್‌ಫೋನ್‌ನ ವಿಶೇಷವಾಗಿದ್ದು, ಅದನ್ನು ಮಡಚಿದಾಗ ಪುಸ್ತಕದಂತೆ ಕಾಣಲಿದೆ.

3. ಹುವೈ ಮೇಟ್‌ ಎಕ್ಸ್‌
ವಿಶ್ವದ ಮೊದಲ 5ಜಿ ಮಡಚುವ ಸ್ಮಾರ್ಟ್‌ ಫೋನ್‌ ಆಗಿರುವ ಹುವೈ ಮೇಟ್‌ ಎಕ್ಸ್‌ 8 ಇಂಚಿನ ಟ್ಯಾಬ್ಲೆಟ್‌ ಆಗಿದ್ದು, ಮಡಚಿದಾಗ 6.6 ಇಂಚಿನ ಫ‌ುಲ್‌ ಸ್ಕ್ರೀನ್‌ನ ರೂಪ ಪಡೆದುಕೊಳ್ಳುತ್ತದೆ. ಮೇಟ್‌ ಎಕ್ಸ್‌ನ ಬೆಲೆ ಭಾರತದಲ್ಲಿ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿಟ್ಟಿರುವ ಕಂಪೆನಿ, ಮೇಟ್‌ ಎಕ್ಸ್‌ಗೆ 2,299 ಯುರೋಸ್‌ ಬೆಲೆಯನ್ನು ನಿಗದಿ ಮಾಡಿದೆ. ಈ ಬೆಲೆಯನ್ನು ಭಾರತಕ್ಕೆ ರೂಪಾಯಿಗೆ ಅಂದಾಜು ಮಾಡಿದ್ದರೆ ರೂ 1.80 ಲಕ್ಷ ಆಗುತ್ತದೆ.

Advertisement

4.ಮೊಟೊರೊಲಾ
ಲೆನೊವೊ ಕಂಪೆನಿ ಒಡೆತನದ ಮೊಟೊರೊಲಾ ಸಹ ಫೋಲೆxàಬಲ್‌ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡುತ್ತಿದೆ ಇದರ ಬೆಲೆ ಇತರ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳ ಬೆಲೆಗಿಂತ ಕಡಿಮೆಯಾಗಿರಲಿದೆ. ಕ್ವಾಲ್ಕಂ ಸ್ನಾಪ್‌ ಡ್ರಾಗನ್‌ನ 710 ಶಕ್ತಿಯ ಪೊ›ಸೆಸರ್‌ ಅನ್ನು ಹೊಂದಿರುವ ಮೊಟೊರೊಲಾ 6 ಜಿಬಿ ರ್ಯಾಮ್‌ ಮತ್ತು 64ಜಿಬಿ/128ಜಿಬಿ ಸ್ಟೋರೇಜ್‌ ಸಾಮರ್ಥ್ಯಯನ್ನು ಹೊಂದಿರಲಿದೆ. ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬರಲಿವೆ.

5. ರಾಯಲ್‌ ಫ್ಲೆಕ್ಸ್‌ಪೈ
ಚೀನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಮೊದಲ ಫೋಲೆxàಬಲ್‌ ಫೋನ್‌ ಆಗಿದ್ದು, ಚೀನಾ ಮಾರುಕಟ್ಟೆಯಲ್ಲಿ 1,300 ಯುವಾನ್‌ ಬೆಲೆಗೆ ಮಾರಾಟವಾಗುತ್ತಿದೆ. 855 ಕ್ವಾಲ್ಕಂ ಸ್ನಾಪ್‌ ಡ್ರಾಗನ್‌ನ ಸಾಮರ್ಥ್ಯ ಹೊಂದಿರುವ ರಾಯಲ್‌ ಫ್ಲೆಕ್ಸ್‌ಪೈ ಭಾರತದಲ್ಲಿ 1.1 ಲಕ್ಷಕ್ಕೆ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, 6 ಜಿಬಿ ರ್ಯಾಮ್‌ ಹಾಗೂ 7.8 ಇಂಚು ಅಗಲದ ಡಿಸ್‌ಪ್ಲೇಯನ್ನು ಹೊಂದಿದೆ.

6. ಆ್ಯಪಲ್‌
ವಿಭಿನ್ನ ರೀತಿಯಲ್ಲಿ ಮೊಬೈಲ್‌ ಫೋನ್‌ಗಳನ್ನೂ ಉತ್ಪನ್ನ ಮಾಡುವ ಆಪಲ್‌ ಕಂಪನಿ ಕೂಡ ಈ ಸಲ ಮಡಚುವ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ನಿರತವಾಗಿದ್ದು, ಯಾವ ಯಾವ ಫೀಚರ್ಗಳನ್ನು ಅಳವಡಿಸಲಿದೆ ಎಂಬ ವಿಷಯವನ್ನು ಮಾತ್ರ ಬಹಿರಂಗ ಮಾಡಿಲ್ಲ. ಕಳೆದ ವರ್ಷವೇ ಫೋಲ್ಡೇಬಲ್ ಮೊಬೈಲ್‌ಗ‌ಳ ಬಿಡುಗಡೆ ಕುರಿತು ಸುದ್ದಿ ಮಾಡಿದ ಆ್ಯಪಲ್‌ ಕಂಪನಿ ಹೊಸ ಫೋನ್‌ನ ಬಿಡುಗಡೆಗೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next