Advertisement

Treck way: ಚಾರಣಕ್ಕೆ ಆನ್‌ಲೈನ್‌ ಟಿಕೆಟ್‌: ಇಂದು ಚಾಲನೆ

04:02 AM Oct 03, 2024 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ಚಾರಣ ಪಥಗಳಿಗೂ ಒಂದೇ ವೇದಿಕೆಯಲ್ಲಿ ಟಿಕೆಟ್‌ ಖರೀದಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಅಧಿಕೃತವಾದ ನೂತನ ವೆಬ್‌ಸೈಟ್‌ ಅನ್ನು ಸಿದ್ಧಪಡಿಸಿದ್ದು, ಅದಕ್ಕೆ ಗುರುವಾರ ಚಾಲನೆ ಸಿಗಲಿದೆ.

Advertisement

70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ “ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ನೂತನ ವೆಬ್‌ಸೈಟ್‌ಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಪ್ರಕಟಿಸಿದರು.

ಅರಣ್ಯ ಇಲಾಖೆಯ ಅಡಿ ಬರುವ ರಾಜ್ಯ ವ್ಯಾಪ್ತಿಯಲ್ಲಿನ ಸುಮಾರು 43 ಚಾರಣ ಸ್ಥಳಗಳನ್ನು ಪಟ್ಟಿ ಮಾಡಲಾಗಿದ್ದು, ಇಂದಿನಿಂದ (ಗುರುವಾರ) ಎಲ್ಲ ಚಾರಣ ಪಥಗಳು ಪ್ರಾರಂಭವಾಗಲಿವೆ. ಚಾರಣಿಗರು ತಮ್ಮ ಹಿತದೃಷ್ಟಿಯಿಂದ ಅಧಿಕೃತ ವೆಬ್‌ಸೈಟ್‌ ಮೂಲಕ ಮುಂಗಡವಾಗಿ ಟಿಕೆಟ್‌ ಖರೀದಿಸಿ ಚಾರಣಕ್ಕೆ ಹೋಗಬೇಕು. ವೆಬ್‌ಸೈಟ್‌ ಬಗ್ಗೆ ತಿಳಿಯದೇ ಹೋದಂತಹ ಶೇ.10ರಷ್ಟು ಚಾರಣಿಗರಿಗೆ ಮಾತ್ರ ಸ್ಥಳದಲ್ಲಿಯೇ ಟಿಕೆಟ್‌ ನೀಡಲಾಗುತ್ತದೆ ಎಂದು ಹೇಳಿದರು.

ಇಂದಿನಿಂದ ಕುಮಾರ ಪರ್ವತ ಚಾರಣ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿ ರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದಲ್ಲಿರುವ ಕುಮಾರ ಪರ್ವತ ಚಾರಣ ಪಥವು ಇಂದಿನಿಂದ (ಗುರುವಾರ) ಮರು ಪ್ರಾರಂಭವಾಗಲಿದೆ. ಕಳೆದ ಜ. 26 ಹಾಗೂ 27ರಂದು ಮಿತಿಗೂ ಮೀರಿದ ಸಾವಿರಾರು ಚಾರಣಿಗರು ಆಗಮಿಸಿದ್ದ ಹಿನ್ನೆಲೆ ಜನದಟ್ಟಣೆ ಉಂಟಾಗಿತ್ತು. ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 8 ತಿಂಗಳ ಅನಂತರ ಚಾರಣ ಪಥವನ್ನು ಪುನರ್‌ ಪ್ರಾರಂಭಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next