Advertisement

ಭಾರಿ ಮಳೆಗೆ ಧರೆಗುರುಳಿದ ಮರಗಳು

12:51 PM Aug 25, 2018 | Team Udayavani |

ಬೆಂಗಳೂರು: ಹಲವು ದಿನಗಳ ಬಿಡುವಿನ ಬಳಿಕ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. 

Advertisement

ಬೆಳಗ್ಗೆಯಿಂದಲೂ ನಗರದಲ್ಲಿ ಮೋಡ ಮುಸುಕಿನ ವಾತಾವರಣವಿದ್ದು, ಸುರಿದ ದಿಢೀರ್‌ ಮಳೆಗೆ ಬೈಕ್‌ ಸವಾರರು ಸಮಸ್ಯೆ ಅನುಭವಿಸುವಂತಾಯಿತು. ಪ್ರಮುಖವಾಗಿ ಸಂಪಂಗಿ ರಾಮನಗರ, ಹಲಸೂರು, ಯಶವಂತಪುರ, ರಾಜರಾಜೇಶ್ವರಿನಗರ, ಉತ್ತರಹಳ್ಳಿ, ಬೆಳ್ಳಂದೂರು, ಎಚ್‌ಎಎಲ್‌, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಧಾರಾಕರ ಮಳೆಯಾಗಿದೆ. 

 ಓಕಳಿಪುರ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಕೆ.ಆರ್‌.ಮಾರುಕಟ್ಟೆ, ಮೇಖೀ ವೃತ್ತ, ಹೆಬ್ಟಾಳ ರಸ್ತೆ ಮೇಲ್ಸೇತುವೆ ಕೆಳಭಾಗ, ಮೈಸೂರು ರಸ್ತೆ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಗಾಂಧಿನಗರ ಸೇರಿದಂತೆ ಪ್ರಮುಖ ಭಾಗಗಳಲ್ಲಿ ರಸ್ತೆಗಳಲ್ಲಿ  ನೀರು ಹರಿದ ಪರಿಣಾಮ ವಾಹನ ಸಂಚಾರ ವೇಗ ಕಡಿಮೆಯಾಗಿ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು. 

ಜತೆಗೆ ಜೋರಾದ ಗಾಳಿಯೊಂದಿಗೆ ಸುರಿದ ಮಳೆಗೆ ಅಗರ ಕೆರೆ, ಸೆಂಟ್‌ಜಾನ್ಸ್‌ ಆಸ್ಪತ್ರೆ, ದೊಮ್ಮಲೂರು ಮೇಲುಸೇತುವೆ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದ ಪರಿಣಾಮ ಕೆಲ ಕಾಲ ದಟ್ಟಣೆ ಉಂಟಾಗಿತ್ತು. ನಂತರದಲ್ಲಿ ಪಾಲಿಕೆಯ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ: ನಗರದ ಕೇಂದ್ರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಸಂಪಂಗಿರಾಮನಗರ 44.5 ಮಿಲಿ ಮೀಟರ್‌ ದಾಖಲಾಗಿದೆ. ಉಳಿದಂತೆ ಬಸವೇಶ್ವರ ನಗರ 24.5, ಅಗ್ರಹಾರ ದಾಸರಹಳ್ಳಿ, ಆರ್‌ಆರ್‌ನಗರ ತಲಾ 25.5, ದಯಾನಂದನಗರ, ನಾಗರಬಾವಿಯಲ್ಲಿ 19, ಶಿವನಗರ, ಹೊಯ್ಸಳನಗರ, ನಾಗಪುರ, ಹಂಪಿನಗರ 17, ಬಸವನಗುಡಿ, ನಾಗಪುರ, ಅರಮನೆ ಗುಟ್ಟಹಳ್ಳಿ 16, ನಂದಿನಿ ಬಡಾವಣೆ, ಬೊಮ್ಮನಹಳ್ಳಿ, ಸಾರಕ್ಕಿ 10, ಲಕ್ಕಸಂದ್ರ 12, ಕೆಂಗೇರಿ 18, ಲಾಲ್‌ಬಾಗ್‌, ದೊಡ್ಡನಕ್ಕುಂದಿ 13, ಪುಲಕೇಶಿ ನಗರ 15 ಹಾಗೂ ವಿದ್ಯಾಪೀಠ 22 ಮಿ.ಮೀ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next