Advertisement

ಅಪಾಯಕಾರಿ ಸ್ಥಿತಿಯಲ್ಲಿ ಮರಗಳು

10:39 PM Jul 13, 2019 | sudhir |

ಕಾರ್ಕಳ: ಮುರತ್ತಂಗಡಿ – ಇರ್ವತ್ತೂರು ಸಂಪರ್ಕಿಸುವ ಕುಕ್ಕಟ್ಟೆ ಎಂಬಲ್ಲಿ ರಸ್ತೆ ಬದಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ.

Advertisement

ಜೋರು ಗಾಳಿ ಮಳೆ ಬಂದಲ್ಲಿ ಮರ ಉರುಳಿ ಬೀಳುವಂತಿದ್ದರೂ ಸಂಬಂಧ ಪಟ್ಟವರು ಕ್ಯಾರೇ ಅನ್ನುತ್ತಿಲ್ಲ. ಮರ ಬಿದ್ದಲ್ಲಿ ವಿದ್ಯುತ್‌ ತಂತಿ ಮೇಲೆಯೇ ಬೀಳುವ ಸಾಧ್ಯತೆ ಅಧಿಕವಾಗಿದ್ದು, ವಿದ್ಯುತ್‌ ಕಂಬ ಬಿದ್ದಲ್ಲಿ ಅಪಾರ ನಷ್ಟ ಸಂಭವಿಸಲಿದೆ ಎಂಬುದು ಸ್ಥಳೀಯರ ಆರೋಪ.

ಮುರತ್ತಂಗಡಿಯಿಂದ ಇರ್ವತ್ತೂರು ಜಂಕ್ಷನ್‌ ವರೆಗಿನ ಸುಮಾರು 3.5 ಕಿ.ಮೀ. ರಸ್ತೆಯನ್ನು ಸಿಆರ್‌ಎಫ್‌ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 5 ಕೋಟಿ ರೂ. ಅನುದಾನದಲ್ಲಿ ರಸ್ತೆ ವಿಸ್ತರಣೆಯೊಂದಿಗೆ ಕಾಂಕ್ರೀಟೀಕರಣಗೊಳ್ಳುತ್ತಿದೆ. ಹೀಗಾಗಿ ಕುಕ್ಕೆಟ್ಟೆ ಅರಣ್ಯ ಪ್ರದೇಶದಲ್ಲಿ ಏರುಗತಿಯ ರಸ್ತೆಯನ್ನು ತಗ್ಗಿಸಿ ಸಮತಟ್ಟು ಮಾಡ ಲಾಗಿದ್ದು, ಮರ ಧರೆ ಮೇಲೆಯೇ ಉಳಿದಿದೆ. ಗುತ್ತಿಗೆದಾರರು ಮರ ಕಡಿ ಯಲು ಮುಂದಾಗಿಲ್ಲ.

ಸಂಬಂಧಪಟ್ಟ ಅಧಿಕಾರಿಗಳು ಮರ ತೆರವುಗೊಳಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಪತ್ರಿಕೆಗಳು ಈ ಕುರಿತು ವರದಿ ಮಾಡಿ ಇಲಾಖೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದರೂ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next