ಗೋಣಿಕೊಪ್ಪ: ಪೊನ್ನಂಪೇಟೆ ಜೆಸಿಐ ನಿಸರ್ಗ, ತಿತಿಮತಿ ವಲಯ ಅರಣ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ನಾಂಗಾಲ ಯುವಕ ಸಂಘ, ಕಾವೇರಿ ಯುವಕ ಸಂಘ ಮಾಯಮುಡಿ, ಕಾವೇರಿ ಕಾಲೇಜು ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ತಿತಿಮತಿ ಅರಣ್ಯದಲ್ಲಿ ವಿವಿದ ಜಾತಿ ಗಿಡಗಳನ್ನು ನೆಡಲಾಯಿತು.
ಉದ್ಯಮಿ ಕನಸು ದೇವಯ್ಯ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಜಾತಿಯ ಗಿಡ, ಹುಲ್ಲನ್ನು ನೆಟ್ಟು ಅರಣ್ಯ ಸಂಪತ್ತು ಉಳಿಸಿ ಬೆಳಸಿ ಎಂದು ಸಂದೇಶ ಸಾರಿದರು.
ಪೊನ್ನಂಪೇಟೆ ಜೆಸಿಐ ನಿಸರ್ಗದ ಅಧ್ಯಕ್ಷ ಟಾಟು ಮೊಣ್ಣಪ್ಪ ಮಾತನಾಡಿ, ಅರಣ್ಯ ಸಂಪತ್ತು ಸಂರಕ್ಷಿ ಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಯುವ ಜನತೆ ಸಸ್ಯ ಸಂಕುಲ ಉಳಿವಿನ ಬಗ್ಗೆ ಜಾಗೃತಗೊಂಡು ಹಸಿರು ಉಳಿಸಬೇಕು. ಕಾಡಿನ ನಾಶದಿಂದ ಅರಣು ಬಿಟ್ಟು ವನ್ಯಪ್ರಾಣಿಗಳು ನಾಡಿನತ್ತ ಬರುತ್ತಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಡುವ ಮೂಲಕ ಸ್ವತ್ಛಂದ ಕೊಡಗು ನಿರ್ಮಾಣ ಮಾಡಬೇಕು ಎಂದರು.
ಜಿ.ಪಂ. ಸದಸ್ಯ ಬಾನಂಡ ಪೃಥುÂ ಮಾತನಾಡಿ, ಸಂಘ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಯುವ ಜನಾಂಗ ಕೂಡ ಪರಿಸರ ಉಳಿವು ಮಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕು. ನಿಮ್ಮ ಸುತ್ತಮುತ್ತ ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕೆಂದು ಕಿವಿ ಮಾತನಾಡಿದರು.
ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಅಶೋಕ್ ಹನುಗುಂದ, ಪೊನ್ನಂಪೇಟೆ ಜೆಸಿಐ ನಿಸರ್ಗದ ಕಾರ್ಯದರ್ಶಿ ಸಿಂಗಿ ಸತೀಶ್, ಖಜಾಂಜಿ ವಿಕ್ರಂ, ನಿರ್ದೇಶಕರಾದ ವಿನೋದ್, ಧನಂಜಯ್, ಮೆಹರೂಫ್, ನಾಂಗಲ ಯುವಕ ಸಂಘದ ಅಧ್ಯಕ್ಷ ವಸಂತ್, ಸದಸ್ಯರಾದ ಕುಟ್ಟಪ್ಪ, ಬಿದ್ದಪ್ಪ, ಮುತ್ತಪ್ಪ, ಕಾವೇರಪ್ಪ, ಗೋಪಾಲ್, ಕಾವೇರಿ ಕಾಲೇಜ್ ಎನ್‌ಎಸ್‌ಎಸ್ ಅಧಿಕಾರಿ ವನಿತ್ ಕುಮಾರ್ ಹಾಗೂ ರೀತಾ ಪಾಲ್ಗೊಂಡಿದ್ದರು.