Advertisement

ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ: ಸವಾರ ಸಾವು

10:29 AM Sep 13, 2022 | Team Udayavani |

ಬೆಳಗಾವಿ: ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರೀ ಗಾತ್ರದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡ‌ ಘಟನೆ ನಗರದ ಕೋರ್ಟ್ ರಸ್ತೆಯ ಆರ್ ಟಿಒ‌ ಸರ್ಕಲ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.‌

Advertisement

ಬೆಳಗಾವಿ ತಾಲೂಕಿನ ಸಿದ್ದನಹಳ್ಲಿ ಗ್ರಾಮದ ರಾಕೇಶ ಲಗಮಪ್ಪ ಸುಲದಾಳ (22 ವ) ಎಂಬ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಆಂಜನೇಯ ನಗರದ ನೇಮಿರಾಜ ಭೋಪಾಲ ಮರೆಪ್ಪನವರ ಗಾಯಗೊಂಡಿದ್ದಾನೆ.

ಇದನ್ನೂ ಓದಿ:ಸಿಆರ್‌ಝಡ್‌: ಜಿಲ್ಲಾಡಳಿತದ ಆದೇಶ ಹೈಕೋರ್ಟ್‌ನಿಂದ ರದ್ದು :ಮಾನವ ಶ್ರಮದ ಮರಳುಗಾರಿಕೆಗೆ ಅವಕಾಶ

ಎರಡೂ ದ್ವಿಚಕ್ರ ವಾಹನಗಳು ಜಖಂ ಗೊಂಡಿವೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಲೆಯ ಮೇಲೆಯೇ ಮರ ಬಿದ್ದಿದ್ದರಿಂದ ರಾಕೇಶ ಮೃತಪಟ್ಟಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next