Advertisement

ಶಿರಾಡಿ : ಹೆದ್ದಾರಿಗೆ ಉರುಳಿದ ಮರ ತೆರವು ; ರಸ್ತೆ ಸಂಚಾರ ಪುನರಾರಂಭ

08:53 AM Aug 08, 2019 | Team Udayavani |

ನೆಲ್ಯಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಬಳಿಯ ಕೊಡ್ಯಕಲ್ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ತೆರವುಗೊಳಿಸಲಾಗಿದೆ. ಇದೀಗ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಪುನರಾರಂಭಗೊಂಡಿದೆ.

Advertisement

ಕಿರಿದಾಗಿರುವ ಹೆದ್ದಾರಿಗೆ ಅಡ್ಡಲಾಗಿ ಮರ ಉರುಳಿ ಬಿದ್ದಿದ್ದ ಕಾರಣದಿಂದ ಎರಡೂ ಬದಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿಕೊಂಡು ರಸ್ತೆಗೆ ಬಿದ್ದಿರುವ ಮರವನ್ನು ಕ್ಷಿಪ್ರವಾಗಿ ತೆರವುಗೊಳಿಸಿ ವಾಹನ ಸಂಚಾರ ಪುನರಾರಂಭಗೊಳ್ಳಲು ಕಾರಣರಾದರು.


ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಶಿರಾಡಿ ಗ್ರಾಮಪಂಚಾಯತ್ ಸದಸ್ಯ ಪ್ರಕಾಶ್ ಗುಂಡ್ಯ, ನಿಶಾಂತ್ ಶಿರಾಡಿ, ಸುಭಾಷ್ ಗುಂಡ್ಯ, ಉಮೇಶ್ ಪೇರುಮಜಲು, ಪೊಡಿಯ ಪೆರುಮಜಲು, ಜೋಮನ್ ಅಡ್ಡಹೊಳೆ ಮತ್ತು ಇತರರು ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ತೆರವು ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next